Labels

Sunday, 29 March 2020

ಎಚ್ಚರಿಕೆ ಎಚ್ಚರಿಕೆ ಮನವೆ


ಎಚ್ಚರಿಕೆ ಎಚ್ಚರಿಕೆ ಮನವೆ - ನಮ್ಮ
ಅಚ್ಯುತನ ಪಾದಾರವಿಂದ ಧ್ಯಾನದಲಿ ಪ.
ಆಶಾಪಾಶದೊಳಗೆ ಸಿಲುಕಿ - ಬಹು
ಕ್ಲೇಶಪಟ್ಟು ತುಟ್ಟ ಸುಖದ ಮರುಳಿಕ್ಕಿ
ಹೇಸಿ ಸಂಸಾರದಲಿ ಸಿಲ್ಕಿ - ಮಾಯಾ
ಕ್ಲೇಶ ಅಂಬರ ಕೇಳಾಗೆ ಮೈಮರೆತು ಸೊಕ್ಕಿ 1
ಹಣ - ಹೆಣ್ಣು - ಮಣ್ಣಾಸೆ ವ್ಯರ್ಥ - ಈ
ತನುವಿಗೆ ಯಮಪುರ ಪಯಣವೇ ನಿತ್ಯ
ಮೂರು ಶೃಂಗಾರಗಳು ಮಿಥ್ಯ - ಅಂತ
ಕನ ಯಾತನೆಗಳಿಗೆ ಹರಿನಾಮ ಪತ್ಯ 2
ತೊಗಲ ಚೀಲ ಒಂಬತ್ತು ಹರುಕು - ನರ
ಬಿಗಿದು ಕಟ್ಟಿ ಒಳಗೆ ಎಲುವುಗಳ ಸಿಲುಕು
ಬಗೆರಕ್ತ - ಮಾಂಸದ ಹುಳುಕು - ಒ
ಳಗೆ ಮಲ - ಕಫ - ವಾತ - ಪಿತ್ತದ ಸರಕು 3
ದುಷ್ಟರ ಸಹವಾಸ ಹೀನ - ಬಲು
ಇಷ್ಟ ಜನಸಂಗವು ಹರಕೆ ಬಹುಮಾನ
ಎಷ್ಟು ಓದಿದರಷ್ಟು e್ಞÁನ - ಆದರ
ಲ್ಲಿಟ್ಟು ಭಕುತಿಯ ತಿಳಿಯಲೊ ಸಾವಧಾನ 4
ನಾಲಿಗೆಯ ಹರಿಯ ಬೀಡಬೇಡ - ತಿಂಡಿ
ವಾಳರ ರುಚಿವಾತಗಳನೊರಿಸಬೇಡ
ಹಾಳು ಮಾತು ಗೊಡಬೇಡ -ಶ್ರೀ
ಲೋಲ ಪುರಂದರವಿಠಲನ ಬಿಡಬೇಡ 5


No comments:

Post a Comment