Labels

Thursday, 26 March 2020

ಆರೋಗಣೆಯ ಮಾಡೋ ಎನ್ನಯ್ಯ


ಆರೋಗಣೆಯ ಮಾಡೋ ಎನ್ನಯ್ಯ
ಆರೋಗಣೆಯ ಮಾಡೋ ಪ.
ನಾರದಾರ್ಚಿತಪಾದ ನಾರಾಯಣ ಸ್ವಾಮೀ ಅ.ಪ
ಸರಸಿಜಾಲಯೆ ಲಕ್ಷ್ಮಿ ಸರಸ್ವತಿ ಭಾರತಿ
ಪರಿಪರಿ ಅಡಿಗೆಯ ಸಿದ್ದ ಮಾಡಿಹರೊ ||
ಪರಿಮಿತಿಯಿಲ್ಲದ ರುಚಿಯ ಪದಾರ್ಥವ
ಪರಮ ಪುರುಷ ಉಂಡು ದಯ ಮಾಡೋ ಸ್ವಾಮಿ 1
ಅಂಬುಜಮುಖಿ ಲಕ್ಷ್ಮಿ ತಾಂಬೂಲ ಕೊಡುವಳು
ಕಂಬುಕಂಧರನೇ ನೀ ಕೈಕೊಳು ಬೇಗ ||
ರಂಭೆ ಊರ್ವಸಿ ಮೇನಕೆ ಮೊದಲಾದವರು
ಸಂಭ್ರಮದಿ ಬಂದು ನಾಟ್ಯಕೆ ಕಾದಿಹರೊ ಸ್ವಾಮಿ 2
ಸರಸಿಜಭವನಯ್ಯ ಪುರಂದರವಿಠಲ
ಸರುವ ಭೋಗ ಭುಂಜಿಪ ನರರ ಪಾಲಿಸೊ ದೇವಾ 3


No comments:

Post a Comment