Labels

Thursday, 5 March 2020

ಆನಂದಾದ್ರಿ ಕ್ಷೇತ್ರದಲ್ಲಿಆನಂದವ ಕಂಡೆ anandadi kshetradalli anandava kande



ಆನಂದಾದ್ರಿ ಕ್ಷೇತ್ರದಲ್ಲಿ
ಆನಂದವ ಕಂಡೆ ಪ.
ಆನಂದ ಕಂದನ ಗುಣಗಳ
ಆನಂದನಿಲಯರು ಪೇಳಲು ಅ.ಪ.
ಆನಂದವಾಯಿತು ಮನಕೆ
ಆನಂದಗೋಕುಲದೊಡೆಯನು
ಆನಂದತೀರ್ಥರ ಕರದಲಿ
ಆನಂದ ಸೇವೆಯ ಕೊಳುತಿರೆ 1
ಆನಂದಾದ್ರಿ ಶಿಖರದಲ್ಲಿ
ಸ್ವಾನಂದ ಸೂಚನೆ ತೋರಲು
ಏನೆಂದು ಬಣ್ಣಿಸಲಿನ್ನು
ಸ್ವಾನಂದರು ಶ್ರೀ ಗುರು ದಯದಿ 2
ಆನೆಂದರೆ ಶಿಕ್ಷಿಸುವನು ಹರಿ
ನೀನೆಂದರೆ ರಕ್ಷಿಸುವನು ದೊರಿ
ಆನಂದವನ ತರುವಂತೆ
ಆನಂದಭೀಷ್ಟವ ಕೊಡುವ 3
ಆನಂದe್ಞÁನಪೂರ್ಣ
ಆನಂದ ನಿತ್ಯರೂಪ
ಆನಂದ ಗುಣಪೂರ್ಣ ನಿ-
ತ್ಯಾನಂದ ಭಕ್ತರಿಗೀವ4
ಗೋಪಾಲಕೃಷ್ಣವಿಠಲ
ನೀ ಪರಮದೈವವೆನಲು
ತಾಪವÀ ಭವಹರಿಸಿ
ಕಾಪಾಡೊ ಹರಿಯ ಲೀಲೆ 5


No comments:

Post a Comment