Labels

Friday, 20 March 2020

ಕಾಯೇ ಕಮಲಾಲಯೇ


ಕಾಯೇ ಕಮಲಾಲಯೇ
ಮಧು ಮಥನ ಸತಿಯೆ ಪ
ಕಾಯಜಾತನ ತಾಯೆನಮಿಸುವೆ
ಕಾಯೆ ತ್ರಿಜಗಕೆ ತೋಯ ಜಾಂಬಕಿ ಅ.ಪ
ತೋಯಜಾಸನ ಮುಖ್ಯ ತ್ರಿದಶ ನಿ
ಕಾಯ ಸಂಶೇವಿತಳೆ ಬೇಡುವೆ
ಹೇಯ ವಿಷಯವ ಮರಸಿ ಹರಿಪದ
ತೋಯಜಕೆ ಮನವೆರಗುವಂದದಿ 1
ಘೋರತರ ಸಂಸಾರ ಶ್ರಮ ಪರಿ
ಹಾರ ಮಾಳ್ಪ ಸಮೀರ ಸಮಯದಿ
ಸಾರವನು ಸುಜನರಿಗೆ ಬೋಧಿಪ
ಸೂರಿಗಳ ಸಹವಾಸ ಪಾಲಿಸಿ 2
ಭಾರ್ಗವಿಯೆ ಕಾಮಾದಿ ಷಡ್ರಿಪು
ವರ್ಗವನು ಗೆಲುವದಕೆ ಗುರುಗಳ-
ನು ಗ್ರಹಿಸಿ ಸುe್ಞÁನ ಭಕುತಿ ವೈ
ರಾಗ್ಯ ವೆಂಬುವ ಭಾಗ್ಯ ಒದಗಿಸಿ 3
ರಾಮನರಸಿಯೆ ನಿಮ್ಮ ಶುಭಪದ
ತಾಮರಸವನು ಬಿಡದೆ ಪೂಜಿಪ
ಕಾಮಿನೀ ಜನ ಸ್ತೋಮಕನುದಿನ
ಕಾಮಿತಾರ್ಥಗಳಿತ್ತು ಕರುಣದಿ 4
ಮಂಗಳಪ್ರದ ಕೃಷ್ಣವೇಣಿ ತ-
ರಂಗ ಶೋಭಿತ ಕಾರ್ಪರಾಲಯ
ತುಂಗ ಮಹಿಮ ವಿಹಂಗ ರಾಜ ತು
ರಂಗ ಶ್ರೀ ನರಸಿಂಗ ನರಸಿಯೆ5


No comments:

Post a Comment