ಇರಬೇಕು ಸಜ್ಜನರಿಗೆ ದುರ್ಜನ
ಪರಿಪರಿ ಪಾಲಿಪುದು ಒಂದು ಸಮಯದಿನ್ನವರ ।।ಪ।।
ಪರಿಪರಿ ಪಾಲಿಪುದು ಒಂದು ಸಮಯದಿನ್ನವರ ।।ಪ।।
ಮೇಲಾದ ತೆಂಗು ಏಲಕ್ಕಿ ಬಾಳೆಯಾಗಿಡವ
ಜಾಲಿಯಾದಿ ಗಿಡದ ಮುಳ್ಳುಗಳಿಂದಲೆ
ಪಾಲನೆಯ ಮಾಡುವರು ಪ್ರಾಕಾರವನ್ನೆ ಮಾಡಿ
ಕಾಲಕಾಲಕೆ ತಂದು ಕಲಿಪರು ಬಿಡದೆ ।।೧।।
ಜಾಲಿಯಾದಿ ಗಿಡದ ಮುಳ್ಳುಗಳಿಂದಲೆ
ಪಾಲನೆಯ ಮಾಡುವರು ಪ್ರಾಕಾರವನ್ನೆ ಮಾಡಿ
ಕಾಲಕಾಲಕೆ ತಂದು ಕಲಿಪರು ಬಿಡದೆ ।।೧।।
ತುಳಸಿಯ ಗಿಡವನ್ನು ಬೆಳೆಸಬೇಕಾದರೆ
ಹೊಲಸು ಉಳ್ಳಿಯ ತಂದು ನಿಲಿಸುವರು
ಕೆಲಕಾಲ ಬೆಳೆದು ಪಂಟಿಯಗಟ್ಟೋದಲ್ಲದೆ
ಹೊಲಸು ಉಳ್ಳಿಯಿಂದೇನು ಅಳುಕು ಆಗುವುದೆ ।।೨।।
ಹೊಲಸು ಉಳ್ಳಿಯ ತಂದು ನಿಲಿಸುವರು
ಕೆಲಕಾಲ ಬೆಳೆದು ಪಂಟಿಯಗಟ್ಟೋದಲ್ಲದೆ
ಹೊಲಸು ಉಳ್ಳಿಯಿಂದೇನು ಅಳುಕು ಆಗುವುದೆ ।।೨।।
ನಯನಕ್ಕೆ ರೆಪ್ಪೆಯಿದ್ದ್ಹಾಗಪಾಯವ ನೀಗಿ ಕರನಿಟ್ಟು
ದಯಾನಿಧಿಯ ಪರಿಪಾಲಿಸುವನು ಬಿಡದೆ
ಭಯ ನಿವಾರಣ ರಂಗ ಗೋಪಾಲವಿಠ್ಠಲನಾಶ್ರಯಿಸಿ
ಯಿದ್ದಂಗೆ ದುರುಳರ ಭಯವೆ ಮರುಳೆ ।।೩।।
ದಯಾನಿಧಿಯ ಪರಿಪಾಲಿಸುವನು ಬಿಡದೆ
ಭಯ ನಿವಾರಣ ರಂಗ ಗೋಪಾಲವಿಠ್ಠಲನಾಶ್ರಯಿಸಿ
ಯಿದ್ದಂಗೆ ದುರುಳರ ಭಯವೆ ಮರುಳೆ ।।೩।।
No comments:
Post a Comment