ಎಂತು ತುತಿಸಲಿ ಎನ್ನದೇವನ ಸಂತತ ನಮ್ಮ ಸಲಹೋನ
ಅಂತರಂಗದಿ ಹರಿಯ ತೋರಿಸಿ ಸಂತೋಷದಿಂದ ನಲಿವ ಪವನನ ।।ಪ।।
ಅಂತರಂಗದಿ ಹರಿಯ ತೋರಿಸಿ ಸಂತೋಷದಿಂದ ನಲಿವ ಪವನನ ।।ಪ।।
ತಾನು ಮಾಡಿದ ಕರ್ಮಶೇಷವು ತಾನು ತಿಳುಹಿದ ಜ್ಞಾನಶೇಷವು
ತಾನು ಮಾಡಿದ ಭಕುತಿಶೇಷವು ನಾನಾ ಸಾಧನಶೇಷವು
ತಾನು ಕರುಣಿಸಿ ಜೀವಯೋಗ್ಯತೆಯೇನು ಅರಿತು ಕರ್ಮಮಾಡಿಸಿ
ತಾನು ಸಹಿತ ಧ್ಯಾನದಲಿ ಹರಿ ಕಾಣಿಸಿ ತೋರ್ಪ ಕರುಣೆಯ ।।೧।।
ತಾನು ಮಾಡಿದ ಭಕುತಿಶೇಷವು ನಾನಾ ಸಾಧನಶೇಷವು
ತಾನು ಕರುಣಿಸಿ ಜೀವಯೋಗ್ಯತೆಯೇನು ಅರಿತು ಕರ್ಮಮಾಡಿಸಿ
ತಾನು ಸಹಿತ ಧ್ಯಾನದಲಿ ಹರಿ ಕಾಣಿಸಿ ತೋರ್ಪ ಕರುಣೆಯ ।।೧।।
ಇವನ ಪ್ರೇರಣೆ ಹರಿಯ ಪ್ರೇರಣೆ ಇವನ ಸೇವೆಯು ಹರಿಯ ಸೇವೆಯು
ಇವನ ಕರುಣವೆ ಹರಿಯ ಕರುಣವು ಇವನ ಬಲವೇ ಪ್ರಬಲವು
ಇವನು ನಂಬಲು ಹರಿಯು ನಂಬುವ ಇವನು ಒಲಿಯಲು ಹರಿಯು ಒಲಿಯುವ
ಪವನಾಖ್ಯನಾಗಿ ನಮ್ಮನು ಪವನಗತಿ ಪೊಂದಿಸುವನ ।।೨।।
ಇವನ ಕರುಣವೆ ಹರಿಯ ಕರುಣವು ಇವನ ಬಲವೇ ಪ್ರಬಲವು
ಇವನು ನಂಬಲು ಹರಿಯು ನಂಬುವ ಇವನು ಒಲಿಯಲು ಹರಿಯು ಒಲಿಯುವ
ಪವನಾಖ್ಯನಾಗಿ ನಮ್ಮನು ಪವನಗತಿ ಪೊಂದಿಸುವನ ।।೨।।
ಜ್ಞಾನಭಕುತಿ ವೈರಾಗ್ಯಖಣಿಯು ದಾನವಾಂತಕ ಧರ್ಮಶೀಲ
ಪೂರ್ಣಬೋಧೆಯ ಪುಣ್ಯನಾಮಕ ಪ್ರಾಣಾಪಾಣವುದಾನರಿಗೆ
ಪ್ರಾಣ ಮುಖ್ಯಪ್ರಾಣ ಇವ ನಮ್ಮ ಪ್ರಾಣನಿಲ್ಲದು ಇವನು ಇಲ್ಲದಿರೆ
ಪ್ರಾಣಪತಿ ಗೋಪಲವಿಠಲನ ಕಾಣಿಸಿ ತೋರ್ಪ ಕರುಣೆಯ ।।೩।।
ಪೂರ್ಣಬೋಧೆಯ ಪುಣ್ಯನಾಮಕ ಪ್ರಾಣಾಪಾಣವುದಾನರಿಗೆ
ಪ್ರಾಣ ಮುಖ್ಯಪ್ರಾಣ ಇವ ನಮ್ಮ ಪ್ರಾಣನಿಲ್ಲದು ಇವನು ಇಲ್ಲದಿರೆ
ಪ್ರಾಣಪತಿ ಗೋಪಲವಿಠಲನ ಕಾಣಿಸಿ ತೋರ್ಪ ಕರುಣೆಯ ।।೩।।
No comments:
Post a Comment