Labels

Friday, 18 October 2019

ದೇವಿ ಅಂಬುಜವಲ್ಲಿ Devi Ambujavalli

ದೇವಿ ಅಂಬುಜವಲ್ಲಿ ರಮಣನೆ 
ಭೂವರಾಹ ದಯಾನಿಧೇ 
ಪವಮಾನನ ದಿವ್ಯ ಕರದಲಿ 
ಸೇವೆ ಸಂತತ ಕೊಳ್ಳುವೆ ॥೧॥
ಅವನಿಯೊಳು ಶ್ರೀಮುಷ್ಣ ಕ್ಷೇತ್ರದಿ 
ನೀ ವಿಹಾರವ ಮಾಡುವೆ 
ಭವವಿಮೋಚನ ಭಕ್ತವತ್ಸಲ 
ಕವಿಗಳಿಗೆ ಕರುಣಾಕರ ॥೨॥
ಅತ್ಯಗಾಧ ಸುಶೀಲ ಜಾಹ್ನವಿ 
ಸುತ್ತು ಷೋಡಶ ತೀರ್ಥದಿ 
ನಿತ್ಯ ಪುಷ್ಕರಿಣಿಯ ಗರ್ಭದಿ 
ನಿತ್ಯ ಇರುವುದು ಕಂಡೆ ನಾ ॥೩॥
ಮತ್ತು ವರ್ಣಿಪೆ ತೀರ್ಥ ತಟದಲಿ 
ಉತ್ತಮಾಗ್ನೇಯ ಭಾಗದಿ 
ಚಿತ್ತವೇದ್ಯದಿ ಕಲ್ಪತರು  
ಶ್ವತ್ಥ ರೂಪದಿ ಇರುವನ ॥೪॥
ಕರಗಳೆರಡನು ಕಟಿಯಲಿಟ್ಟು 
ಕೋರೆಹಲ್ಲನೆ ತೋರುತ 
ಧರಿಸಿ ಚಿನ್ಮಯ ಸಾಲಿಗ್ರಾಮದ 
ಸರವು  ಪರಿ ಬೆಳಗುತ ॥೫॥
ಘನ್ನ ಶ್ವೇತವರಾಹ ಮೂರುತಿ 
ಎನ್ನ ಪೂರ್ವದ ಪುಣ್ಯದಿ 
ನಿನ್ನ ಶುಭಕರ ಪಾದ ಪಂಕಜ 
ವನ್ನು ಕಂಡೆನು ಇಂದು ನಾ ॥೬॥
ಸುಂದರಾನನ ಕಂಜ ಮಧುಪನ 
ಇಂದು ನೋಡಿದ ಕಾರಣ 
ಬಂದ ದುರಿತಗಳೆಲ್ಲ ಪೋದವು 
ಚಂದ ಶುಭಕರವಾದವು ॥೭॥
ಮಲ್ಲಮರ್ದನ ವೈಕುಂಠದಿಂದ 
ಮೆಲ್ಲಮೆಲ್ಲನೆ ಬಂದೆಯಾ 
ಝಲ್ಲಿ ಕಾವಣದಲ್ಲಿ ಕುಳಿತು 
ಎಲ್ಲ ಭಕ್ತರ ಸಲಹುವೆ ॥೮॥
ಸೂಕರಾಸ್ಯನೆ ನಿನ್ನ ಪಾದಕ 
ನೇಕ ವಂದನೆ ಮಾಡುವೆ 

No comments:

Post a Comment