Labels

Friday, 18 October 2019

ಬಂದ್ಯಾ ವಿಠಲ ಬಡವನಲ್ಲಿ bandhya badavanalli

ಬಂದ್ಯಾ ವಿಠಲ ಬಡವನಲ್ಲಿ।
ವೃಂದಾವನದಲ್ಲಿ ಗೋವೃಂದಗಳ ಕಾಯ್ದವನೆ ॥ಪ॥
ಕೊರಳಲಿ ಸರಿಗೆ ಸರಪಳಿ ಪಚ್ಚೆ ಪದಕವು ।
ಪರಿಪರಿಯ ಹಾರ ಶ್ರೀ ತುಳಸಿ ಮಾಲೆ ॥
ಸಿರಿಗಂಧ ಲೇಪ ಶ್ರೀವತ್ಸ ಉರ ಕಿರುಡೊಳ್ಳು ।
ವರಕಟಿಗೆ ಗಂಟೆ ಪರಿಪರಿಯ ಡಾಬವ ಸುತ್ತಿ ॥1॥
ಸುಳಿಗುರುಳು ಮೇಲೆ ಅರಳೆಲೆಯು ಕಿರೀಟ ।
ಎಳೆದಳಿರು ಚೂತ ಮಲ್ಲಿಗೆಯು ದೂರ್ವೆ ॥
ಥಳಥಳಿಪ ಮುಖ ನಾಸ ನಯನ ಫಣೆಯಲಿ ತಿಲಕ ।
ಚಲಿಸುವ ಕರ್ಣಕುಂಡಲ ಪ್ರಭೆಯು ಶೋಭಿಸುತ್ತ ॥2॥
ಮುಂಗೈಯ ಕಡಗ ಸರಪಳಿ ತೋಳ ಭಾಪುರಿ ।
ಶೃಂಗಾರವಾದ ಗದೆ ಶಂಖ ಚಕ್ರ ॥
ಅಂಗೈಯ ಪದುಮ ಅಂಗುಲಿ ವೇಣು ಮೀಟುತ ।
ಹಿಂಗದೆ ಎನ್ನ ಅಂತರಂಗದ ಮನೆಗಿಂದು ॥3॥
ಈಸು ಬಗೆ ಪೂಜೆಯು ಎನ್ನಿಂದಲಾಗದು ।
ಲೇಶವಾದರು ಇಲ್ಲ ಎನಗೆ ಜ್ಞಾನ ॥
ಶ್ರೀಶನೆ ನೀ ನಿಂತಲ್ಲಿ ಸಕಲವು ಉಂಟು ।
ಶ್ರೀ ಶ್ರೀನಿವಾಸ ಗೋಪಾಲವಿಠಲ ವಿಜಯ ॥4॥

No comments:

Post a Comment