Labels

Monday, 7 October 2019

ದೇವ ಬಂದಾನಮ್ಮ deva bandanamma

ದೇವ ಬಂದಾನಮ್ಮ ಸ್ವಾಮಿ ಬಂದಾನೊ
ದೇವರ ದೇವ ಶಿಖಾಮಣಿ ಬಂದಾನೊ
ಉರಗಶಯನ ಬಂದ ಗರುಡಗಮನ ಬಂದ
ನರಗೊಲಿದವ ಬಂದ ನಾರಾಯಣ ಬಂದಾನೊ
ಮಂದರೋದ್ಧರ ಬಂದ ಮಾಮನೋಹರ ಬಂದ
ವೃಂದಾವನಪತಿ ಗೋವಿಂದ ಬಂದಾನೊ
ನಕ್ರಹರನು ಬಂದ ಚಕ್ರಧರನು ಬಂದ
ಅಕ್ರೂರಗೊಲಿದ ತ್ರಿವಿಕ್ರಮ ಬಂದಾನೊ
ಪಕ್ಷಿವಾಹನ ಬಂದ ಲಕ್ಷ್ಮಣಾಗ್ರಜ ಬಂದ
ಅಕ್ಷಯ ಫಲದ ಶ್ರೀ ಲಕ್ಷ್ಮೀರಮಣ ಬಂದಾನೊ
ನಿಗಮಗೋಚರ ಬಂದ ನಿತ್ಯ ತೃಪ್ತನು ಬಂದ
ನಗೆಮುಖ ಪುರಂದರ ವಿಠಲ ಬಂದಾನೊ

No comments:

Post a Comment