Labels

Monday, 7 October 2019

ಶ್ರೀಪತಿಯು ನಮಗೆ shreepatiyu namage

ಶ್ರೀಪತಿಯು ನಮಗೆ ಸಂಪದವೀಯಲಿ
ವಾಣಿಪತಿಯು ನಮಗೆ ದೀರ್ಘಾಯು ಕೊಡಲಿ
ಸುರರ ಗಣವನು ಪೊರೆಯೆ ವಿಷವ ಕಂಠದಲಿಟ್ಟ
ಹರ ನಮಗೆ ಸತತ ಬೆಂಬಲವೀಯಲಿ
ನರರೊಳುನ್ನತವಾದ ಭೋಗಭಾಗ್ಯಂಗಳನು
ಪುರುಹುತ ಪೂರ್ಣ ಮಾಡಿಸಲಿ ನಮಗೆ
ವಿನುತ ಸಿದ್ಧಿಪ್ರದವಿನಾಯಕನ ದಯದಿಂದ
ನೆನೆದ ಕಾರ್ಯಗಳೆಲ್ಲ ನೆರವೇರಲಿ
ದಿನದಿನದಿ ಅಶ್ವಿನಿಗಳು ಆಪತ್ತುಗಳ ಕಳೆದು
ಮನಕೆ ಹರುಷವನಿತ್ತು ಮನ್ನಿಸಲಿ ಬಿಡದೆ
ನಿರುತ ಸುಜ್ಞಾನವನು ಈವ ಮಧ್ವರಾಯ
ಗುರುಗಳಾಶೀರ್ವಾದ ನಮಗಾಗಲಿ
ಪುರಂದರ ವಿಠಲನ ಕರುಣದಿಂದಲಿ ಸಕಲ
ಸುರರ ಒಲುಮೆ ನಮಗೆ ಸ್ಥಿರವಾಗಲಿ

No comments:

Post a Comment