ವಂದಿಪೆ ಗಜಮುಖನೆ ನಿನ್ನನು ಚಂದ್ರಶೇಖರ ಸುತನೆ
ನಂದಬಾಲನ ಸ್ಮರಣೆ ಮನದೊಳು ತಂದು ನಿಲಿಸು ಇದನೆ ||pa||

ಮಂಗಳ ಮೂರುತಿಯೆ ಕೊಡುವೆನು ತೆಂಗು ಬಾಳೆಯ ಗೊನೆಯ
ರಂಗನಮಲ ಕಥೆಯ ಮಾಡುವೆ ಸಂಗ ತೋರಿಸು ದೊರೆಯೆ ||1||

ಪಾಶಾಂಕುಶಧರನೆ ಸುಂದರ ಮೂಷಕವಾಹನನೆ
ಪೋಷಿಸು ಭಕ್ತರನೆ ಹರಿಕಥೆ ಭಾಷೆಲಿ ನುಡಿಸುವನೆ ||2||

ಪಾರ್ವತಿ ಪಂಕಜನೆ ವಿಘ್ನಗಳ್ಹಾರಿಸಿ ಪಾಲಿಪನೆ|
ಮಾರಜನಕ ಭಜನೆ ಮಾಡುವೆ ತೋರಿಸು ಮಾರ್ಗವನೆ 3||3||

ಭಾರತ ಬರೆದವನೆ ವ್ಯಾಸರ ಭಾಷಿತದಿಳೆದವನೆ|
ಮಾರಜನಕ ಭಜನೆ ಮಾಡುವೆ ತೋರಿಸು ಮಾರ್ಗವನೆ ||4||

ಇಂದಿರೇಶನ ಭಜಕ ನಿನ್ನನು ತಂದು ಮನದಿ ತೂಕ
ಆನಂದದಿ ದಿನ ವಾರಾ ಮಾಳ್ಪುದು ಸುಂದರ ಸುರಲೋಕ ||5||

No comments:
Post a Comment