Labels

Monday, 7 October 2019

ವಂದೆ ಮುಕುಂದ Vande Mukunda

ವಂದೆ ಮುಕುಂದ ಮುಚುಕುಂದ ಪರಿಪಾಲಕ|
ಕುಂದೇಂದು ವದನ ಆನಂದ ಮೂರ್ತಿ|
ಗಂಧ ದೋಷ ದೂರವಾಗಿದ್ದ ಚಿತ್ ಪ್ರಕೃತಿ|
ಯಿಂದ ನೋಡೆ ಚತುರ್ವಿಧ ದೋಷ ದೂರಾ|
ವಂದೇ ಮುಕುಂದ ನಮೋ ವೃಂದಾರಕ ಮುನಿ|
ವೃಂದ ವಂದ್ಯ ಸುಖಸಾಂದ್ರ ಸರ್ವೋತ್ತಮಾ|
ಮಂದಹಾಸ ಮಂದಾಕಿನಿ ಜನಕ|
ಸುಂದರೀನಾಥ ಗೋವಿಂದ ಇಂದೀವರದಳ ಶ್ಯಾಮ|
ಕಂದರ್ಪ ಕೋಟಿ ಲಾವಣ್ಯ ತಾರುಣ್ಯ ಸದ|
ಮಂದಿರಾ ವೈಕುಂಠ ವೈನತೇಯಾ ಶ್ಯಂದನ|
ಸ್ಕಂದ ಸನಂದನಪ್ರಿಯ ಪುರಂದರ ನಂದನ್ನ ಮಾನಭಂಗ|
ಇಂಧನಭೋಕ್ತಾ ನೇತ್ರ ಒಂದೊಂದು|
ಒಂದಾರು ಮೇಲೋಂದು ಕಂಧರನ ಗೋಸುಗ ಅಹಮತಿಯಲ್ಲಿ|
ಬಂದು ನಿಂದೆದಿರಾಗೆ ಜಡಮಾಡಿ ನಿಲಿಸಿದ ಅ|
ರಿಂದರು ದಮ ಶಾಂತ ಪೂರ್ಣಾಪೂರ್ಣಾ|
ವಂದೆ ಮುಕುಂದ ನಮೊ|
ನಂದ ಗೋಕುಲ ಪಾವನ್ನ ವಿಜಯವಿಟ್ಠಲ ರಾಮ|
ಚಂದ್ರ ಪಾಪ ಪರ್ವತಕ್ಕೆ ಇಂದ್ರಾಯುಧವೆಂದೆನಿಪ|

No comments:

Post a Comment