Labels

Wednesday, 9 October 2019

ಸತತ ಪಾಲಿಸೊ ಎನ್ನ sataya paliso enna

ಸತತ ಪಾಲಿಸೊ ಎನ್ನ ಯತಿ  ರಾಘವೇಂದ್ರಾ |
ಪತಿತ ಪಾವನ ಪವನಸುತ ಮತಾಂಬುಧಿ ಚಂದ್ರಾ || ಅ.ಪ. ||
ಕ್ಷೋಣೀಯೊಳಗೆ ಕುಂಭಕೋಣ ಕ್ಷೇತ್ರದಿ ಮೆರೆದೆ |
ವೀಣಾವೆಂಕಟ ಅಭಿದಾನಾದಿಂದಾ |
ಸಾನುರಾಗದಿ ದ್ವಿಜನ ಪ್ರಾಣ ಉಳಿಸಿದ ಮಹಿಮೆ |
ಏನೆಂದು ಬಣ್ಣಿಸಲಿ ಜ್ಞಾನಿಗಳ ಕುಲತಿಲಕಾ | ೧ |
ನಂಬಿದೆನೋ ನಿನ್ನ ಪಾದಾಂಬುಜವ ಮನ್ಮನದಿ |
ಹಂಬಲ ಪೂರೈಸೋ ಬೆಂಬಿಡದಲೆ |
ಕುಂಭಿಣಿ ಸುರ ನಿಕುರುಂಬವಂದಿತ ಜಿತ |
ಶಂಭರಾಂತಕ ಶಾತ ಕುಂಭ ಕಶ್ಯಪ ತನಯಾ | ೨ |
ಮಂದಮತಿಗಳ ಸಂಗದಿಂದ ನಿನ್ನ ಪಾದ |
ಇಂದಿನತನಕ ನಾ ಪೊಂದಲಿಲ್ಲಾ |
ಕುಂದು ಎಣಿಸದೇ  ಕಾಯೋ ಕಂದರ್ಪ ಪಿತ |
ಶ್ಯಾಮ ಸುಂದರ ದಾಸ ಕರ್ಮಂದಿಗಳ ಕುಲವರ್ಯಾ | ೩ |

No comments:

Post a Comment