Labels

Wednesday, 16 October 2019

ಸರ್ವದೇಶದಲ್ಲೇ sarvadeshdalli

ಸರ್ವದೇಶದಲ್ಲೇ ಶ್ರೀಹರಿ ನಮ್ಮನ್ನು ರಕ್ಷಿಸೋ
ಜಲದಲ್ಲಿ ಮತ್ಸ್ಯಾವತಾರನಾಗಿ
ಸ್ಥಳದಲ್ಲಿ ವಾಮನನಾಗಿ ರಕ್ಷಿಸೋ ನಿನ್ನ ಭಕ್ತರನ್ನು
ಆಕಾಶದಲ್ಲಿ ತ್ರಿವಿಕ್ರಮನಾಗಿ ರಕ್ಷಿಸೋ।।
ಭಯಗಳಲ್ಲಿ ನಾರಸಿಂಹನಾಗಿ
ಮಾರ್ಗದಲ್ಲಿ ವರಾಹನಾಗಿ ರಕ್ಷಿಸೋ ನಿನ್ನ ಭಕ್ತರನ್ನು
ಪರ್ವತಾಗ್ರದಲ್ಲಿ ಪರಶುರಾಮನಾಗಿ ರಕ್ಷಿಸೋ
ವನವಾಸದಲ್ಲಿ ರಾಮಚಂದ್ರನಾಗಿ ।।
ಕರ್ಮಬಂಧಂಗಳ ಕಳೆದು ರಕ್ಷಿಸೋ ನಮ್ಮ ಕಪಿಲಮೂರ್ತಿ
ಕಾವೇಶದಲ್ಲಿ ಸನತ್ಕುಮರನಾಗಿ ರಕ್ಷಿಸೋ
ದುರ್ಮಾರ್ಗದಲ್ಲಿ ಹಯಗ್ರೀವನಾಗಿ
ಅನ್ಯದೇವತೆ ಪೂಜಾ ಅಲ್ಲೇ ರಕ್ಷಿಸೋ ನಮ್ಮ ಮಹಿದಾಸ ।।
ಪಾಷಂಡಮತದಲ್ಲಿ ಬೌದ್ಧನಾಗಿ ರಕ್ಷಿಸೋ
ಅನ್ಯ ದೂತಣಿ ಅವತರಿಸಿ ನಮ್ಮ ದುಂದುಭಿಯಾದಿಂದಲಿ ರಕ್ಷಿಸೋ
ನಮ್ಮ ಶ್ರೀವಿಶ್ವಮೂರ್ತಿ ನರಕಗಳಿಂದಲಿ ಕೂರ್ಮನಾಗಿ ರಕ್ಷಿಸೋ
ಆಪತ್ತುಗಳಿಗೆ ಧನ್ವಂತ್ರಿಯಾಗಿ ಕಲಿಯುಗ ಕಲ್ಮಶ ರಕ್ಷಿಸೋ ।।
ನಮ್ಮ ಕಲ್ಕಿ ಮೂರ್ತಿ
ಪ್ರಾತಃಕಾಲದಲ್ಲಿ ಕೇಶವ ನಮ್ಮನ್ನು ರಕ್ಷಿಸೋ
ಸಂಧ್ಯಾಕಾಲದಲ್ಲಿ ವಿಷ್ಣು ನಮ್ಮ ರಕ್ಷಿಸೋ
ಸಂಗಮದಲಿ ಗೋವಿಂದನಾಗಿ ಸಾಯಂಕಾಲದಲ್ಲಿ ರಕ್ಷಿಸೋ ।।
ನಮ್ಮ ಶ್ರೀಧರನಾಗಿ ಪೂರ್ವಕಾಲದಲ್ಲಿ ಹೃಷೀಕೇಶ ನಮ್ಮನ್ನು ರಕ್ಷಿಸೋ
ನಿಶಾಕಾಲದಲ್ಲಿ ಪದ್ಮನಾಭನಾಗಿ ಅಪರಾತ್ರಿ ಕಾಲದಲ್ಲಿ ರಕ್ಷಿಸೋ
ನಮ್ಮ ಶ್ರೀ ವಿಶ್ವಮೂರ್ತಿ ಉಷಃಕಾಲದಲ್ಲಿ ಜನಾರ್ಧನನಾಗಿ ರಕ್ಷಿಸೋ ।।
ಸಕಲ ಕಾಲವು ಸಂಧಿಸಿ ಶ್ರೀ ಹರಿ ನಿಮ್ಮ ಚಕ್ರವು
ಅತಿ ಶಾಲಪ್ರಭೆಯಂತೆ ಪ್ರಳಯಕಾಲದ ಅಗ್ನಿಯಂತೆ
ಈ ಮೂರು ಷಡವೈದು ಸೈನ್ಯಗಳ ಅಗ್ನಿವಾಯು ಒಡಗೂಡಿ ತೃಣವ
ಸುಡುವಂತೆ ಭೂತಗಂಧರ್ವರ ಪೂಷಾಂಡವ ಕೆಡಿಸಿ
ನಮ್ಮ ಸಲಹದೆನುತ ವಿಷ್ಣು ಶಂಖವೇ ನಿಮ್ಮ ಧ್ವನಿ ಕೇಳಿ
ರಾಕ್ಷಸರು ಭಯಬಿಡಿಸಿ ಎದೆಯೊಡೆಸಿ ಲಯವನ್ನು ಮಾಡಿ
ವಿಷ್ಣು ಗಜೇಂದ್ರ ರಾಕ್ಷಸರ ಕಡೆದು ಚೂರ್ಣವ ಮಾಡಿ
ಕಿವಿಗಳ೦ತುದುರಿಸಿ ಭೂಮಿಯಲ್ಲೇ ಅವತರಿಸಿ
ವೈಷ್ಣವ ಸುಜನರನು ಸಲಹೆಂದು ನಿಮ್ಮ ಪ್ರಾರ್ಥನೆಯ ನಾ ಮಾಡಿದೆ
ಸಾಮವೇದಕೆ ಭೀಮನಾದ ಗರುಡಗೆ ಸಲಹುವನು
ನಮ್ಮ ಪ್ರಾಣಾ೦ಗ ಭೂಮಿ ದಿಕ್ಕು ದಿಕ್ಕಿಗೆ ನಾರಸಿಂಹ ಮೂರುತಿಯಾಗಿ
ತಾ ಒಳ ಹೊರಗೆ ವ್ಯಾಪಕನಾಗಿ
ಶ್ರೀಹರಿ ಇದ್ದು ರಕ್ಷಿಸಲಿ ಘೋರ ದುರಿತಗಳೆಲ್ಲ
ಓಡುತಿರಲಿ ಅಂದಾಪರಿಯಲಿ ಸರ್ವವ್ಯಾಪಕನಾಗಿ ರಕ್ಷಿಸೋ
ಎಲ್ಲಾ ಪರಿಯಿಂದ ಭಕ್ತರನ್ನು ನೆನೆಯೆ ಮಧ್ವಗುರು ಅಂತರ್ಯಾಮಿ
ನಮ್ಮ ಶ್ರೀಮದಾನಂದತೀರ್ಥರನು ಸುವ್ವಿ ಸರ್ವೋತ್ತಮನೆ
ಸುವ್ವಿ ವಿಶ್ವರೂಪನೆ ಸುವ್ವಿ ನಮ್ಮ ಶ್ರೀಮದನಂತಾವತಾರಗಳಿಗೆ
ಸುವ್ವಿ ಎಂದು ಪಾಡಿ ಸುಖಿಯಾದ ಜಮದಗ್ನಿ ವತ್ಸಲ ಭೃಗುರಾಮ
ಭೂಮಿ ಜಲದಲ ಜಯ ಶ್ರೀರಾಮ ಜಾನಕಿ ವಲ್ಲಭ
ದಶರಥ ರಾಮ ರಾಮ ನಾಮಕ್ಕಿಂತ ಇನ್ನ್ಯಾವುದೂ ಸರಿಯಿಲ್ಲವೆಂದು
ಮೊರೆ ಹೊಕ್ಕೆನು ಶ್ರೀಹರಿಯೇ ಮುಕ್ತಿ ಬಲವಂತ
ಮುಕ್ತಿ ಗೋವಿಂದ ಕಾಮಧೇನು ಕಲ್ಪತರು ಗೋವಿಂದ
ನಾಮೋಚ್ಚರಣ ಪರಮಾತ್ಮ ಗೋವಿಂದ ಸ್ಮೃತಿತತಿಗಳ ಕೊಂಡಾಡುವೆ
ಹರೇ ನಾರಾಯಣ ಪುರಾಣ ಪುರುಷೋತ್ತಮ
ಆದಿನಾರಾಯಣ ಮಂತ್ರವೊಂದೇ ಅಂಬರೀಷನ ಮರಿಕಾಯ್ದಿತ್ತು
ಈ ಮಂತ್ರ ತುಂಬುರು ನಾರದರಿಗೆ ಶ್ರೀ ಕೃಷ್ಣಮಂತ್ರ
ಶಂಭು ನಾರಿಪಿತನ ಸಲಹಿತು

No comments:

Post a Comment