Labels

Sunday, 6 October 2019

ಸಕಲ ಗ್ರಹ ಬಲ sakala griha bala

ಸಕಲ ಗ್ರಹ ಬಲ ನೀನೇ ಸರಸಿಜಾಕ್ಷನಿಖಿಲ ರಕ್ಷಕ ನೀನೆ ವಿಶ್ವವ್ಯಾಪಕನೇ ||ಪ||

ರವಿಚಂದ್ರ ಬುಧ ನೀನೇ ರಾಹು ಕೇತುವು ನೀನೇಕವಿ ಗುರುವು ಶನಿಯು ಮಂಗಳನು ನೀನೇ
ದಿವ ರಾತ್ರಿಯು ನೀನೇ ನವ ವಿಧಾನವು ನೀನೇ
ಭವರೋಗ ಹರ ನೀನೇ ಭೇಷಜನು ನೀನೇ ||೧||

ಪಕ್ಷಮಾಸವು ನೀನೇ ಪರ್ವ ಕಾಲವು ನೀನೇ
ನಕ್ಷತ್ರ ಯೋಗ ತಿಥಿ ಕರಣಗಳು ನೀನೇ
ಅಕ್ಷಯವೆಂದು ದ್ರೌಪದಿಯ ಮಾನವ ಕಾಯ್ದ
ಪಕ್ಷಿವಾಹನ ದೀನರಕ್ಷಕನು ನೀನೆ ||೨||

ಋತುವತ್ಸರವು ನೀನೆ ಮತ್ತೆ ಯುಗಾದಿಯು ನೀನೇ
ಕ್ರತುವು ಹೋಮ ಯಜ್ಞ ಸದ್ಗತಿಯು ನೀನೇ
ಜಿತವಾಗಿ ಎನ್ನೊಡೆಯ 
ಪುರಂದರ ವಿಟ್ಟಲನೆ
ಶ್ರುತಿಗೇ ಸಿಲುಕದ ಮಹಾಮಹಿಮನು ನೀನೇ

No comments:

Post a Comment