Labels

Sunday, 6 October 2019

ಸದಾ ಎನ್ನ ಹೃದಯದಲ್ಲಿ sada enna Hrudayadalli

ಸದಾ ಎನ್ನ ಹೃದಯದಲ್ಲಿ, ವಾಸ ಮಾಡೋ ಶ್ರೀ ಹರೀ
ನಾದ ಮೂರ್ತಿ ನಿನ್ನ ಪಾದ, ಮೋದದಿಂದ ಭಜಿಸುವೆನೋ

ಙ್ಞಾನವೆಂಬೋ ನವರತ್ನದ ಮಂಟಪದ ಮಧ್ಯದಲ್ಲಿ
ವೇಣುಗಾನ ಲೋಲನ ಕುಳ್ಳಿರಿಸಿ ಧ್ಯಾನದಿಂದ ಭಜಿಸುವೇನೋ

ಭಕ್ತಿರಸವೆಂಬೋ ಮುತ್ತು ಮಾಣಿಕ್ಯದಾ ಹರಿವಾಣದೀ
ಮುಕ್ತನಾಗಬೇಕು ಎಂದುಮುತ್ತಿನ ಆರತಿ ಎತ್ತುವೇನೋ

ನಿನ್ನ ನಾನು ಬಿಡುವನಲ್ಲ ಎನ್ನ ನೀನು ಬಿಡಲು ಸಲ್ಲ
ಘನ ಮಹಿಮ ವಿಜಯ ವಿಠಲ ನಿನ್ನ ಭಕುತರ ಕೇಳೋ ಸೊಲ್ಲ

No comments:

Post a Comment