ರಾಮ ನಾಮವ ನುಡೀ ನುಡೀ
ಕಾಮ ಕ್ರೋಧಗಳ ಬಿಡೀ ಬಿಡೀ ಶ್ರೀ || ಪ ||
ಗುರುಗಳ ಚರಣವ ಹಿಡೀ ಹಿಡಿ
ಹರಿ ನಿರ್ಮಾಲ್ಯವ ಮುಡೀ ಮುಡೀ
ಕರೆ ಕರೆ ಭವಪಾಶ ಕಡೀ ಕಡೀ ಬಂದ
ದುರಿತವನೆಲ್ಲ ಹೊಡೀ ಹೊಡೀ || ೧ ||
ಸಜ್ಜನ ಸಂಗವ ಮಾಡೋ ಮಾಡೋ
ದುರ್ಜನ ಸಂಗವ ಬಿಡೋ ಬಿಡೋ
ಅರ್ಜುನನ ಸಾರಥಿಯ ನೋಡೋ ನೋಡೋ
ಹರಿಭಜನೇಲಿ ಮನ ಇಡೋ ಇಡೋ || ೨ ||
ಕರಿರಾಜ ವರದನ ಸಾರೋ ಸಾರೋ
ಶ್ರಮ ಪರಿಹರಿಸೆಂದು ಹೋರೋ ಹೋರೋ
ವರದ ಭೀಮೇಶನ ದೂರದಿರೋ ನಮ್ಮ
ಪುರಂದರ ವಿಠಲನ ಸೇರೋ ಸೇರೋ || ೩ ||
No comments:
Post a Comment