Labels

Friday, 18 October 2019

ರಾಘವೇಂದ್ರನೆಂಬೋ ರೂಪ raghavendra rupa

ರಾಘವೇಂದ್ರನೆಂಬೋ ರೂಪ ತಾನೇ ಆಗಿ |
ರಾಘವೇಂದ್ರನೆಂಬೋ ನಾಮ ಇಡಿಸಿಕೊಂಡು |
ರಾಘವೇಂದ್ರರಿನ್ನು ಮಾಡಿದಂಥ ಪುಣ್ಯ |
ಭೋಗವರಿತು ತನ್ನ ಭಾಗವತರ ಕೀರ್ತಿ |
ಸಾಗಿಸಿ ಸಲಹಲಿ ತ್ರಿಜಗದೊಳಗಿನ್ನು |
ಮೇಘ ಸುರಿದಂಥ ಅಮೋಘ ಕೀರುತಿಯನ್ನು |
ರಾಘವ ಇವರಿಗೆ ರಾಜ್ಯದಿ ತಂದೀವ |
ರಾಘವೇಂದ್ರ ಮೂರ್ತಿ ಗೋಪಾಲ ವಿಠ್ಠಲ |
ಭಾಗವತರಲ್ಲಿ ಬಹು ಪೂಜೆಯನುಗೊಂಬ || 

No comments:

Post a Comment