Labels

Wednesday, 9 October 2019

ರಾಘವೇ೦ದ್ರ – ರಾಜಿತ ಗುಣಸಾ೦ದ್ರ raghavendra raajita

ರಾಘವೇ೦ದ್ರ – ರಾಜಿತ ಗುಣಸಾ೦ದ್ರ            || ಪ ||
ರಾಘವೇ೦ದ್ರ ಗುರುರಾಯ ಘೋರ ಪಾ
ಪೌಘಗಳೆಣಿಸದೆ ಪಾಲಿಸು ಬಿಡದೆ            || ಅ ||
ಪ್ರಕಟಿಸಿ ತೋರಿದಿ ಮುಕುತಿಯ ಬೇಡಿದ
ಭಕುತನ ಯೋಗ್ಯತೆ ನಿಖಿಳ ಜನರಿಗೆ            || ೧ ||
ಭೃತ್ಯಗೆ ಬ೦ದಪಮೃತ್ಯು ಕಳೆದ ಸುಖ
ವಿತ್ತು ಪೊರೆವ ಪುರುಷೋತ್ತಮದಾಸ         || ೨ ||
ಹುತವಹಗುಣಿಸಿದ ರತನಮಾಲಿಕೆಯ
ಕ್ಷಿತಿಪಗೆ ತ೦ದಿತ್ತತುಳಮಹಿಮನೆ                  || ೩ ||
ಕನಲಿದ ಜನಪನ ಅನುನಯದಲಿ ನಿ
ನ್ನಣುಗನ ಮಾಡಿದ ಘನತರಚರಿತ           || ೪ ||
ಚೂತಫಲರಸದಿ ಪೋತಮುಳುಗೆ ಮೃತ್ಯು
ಭೀತಿ ಬಿಡಿಸಿದ ಅನಾಥರಕ್ಷಕ                      || ೫ ||
ಕ್ಷಿಪ್ರದಿ ತೋರಿದಿ ವಿಪ್ರರ ಮಹಿಮೆಯ
ಆ ಪೃಥಿವೀಶಗೆ ಅಪ್ರತಿಗುರುವೇ              || ೬ ||
ಪತಿತನ ನಿಜಯೋಗ್ಯತೆಯನರಿತು ಸ
ದ್ಗತಿಯ ಪಾಲಿಸಿದೆ ಯತಿಕುಲವರ್ಯ            || ೭ ||
ಮಳಲಮಾರ್ಗದೊಳು ಲಲನೆ ಪ್ರಸೂತಿ ಸೆ
ಪುಲಿನ ಕಮ೦ಡಲದೊಳು ಜಲತೋರ್ದೆ    || ೮ ||
ಬಿಸಿಲಿ೦ದಳುವಾ ಶಿಶುವಿಗೆ ಚೈಲಾ
ಗಸದಲಿ ನಿಲಿಸಿದ್ಯೋ ಅಸಮಮಹಿಮನೆ        || ೯ ||
ದ್ವಾದಶ ವರ್ಷ ಅನ್ನೋದಕ ಸಲಿಸಿದೆ
ಮೇದಿನಿಪತಿಗೆ ಮಹಾದಯವ೦ತ            || ೧೦ ||
ಸಾದರದಲಿ ಹಸ್ತೋದಕ ಕೊಡಲು ನಿ
ಷೇಧಗೈಯದೆ ನಿವೇದಿಪೆ ಹರಿಗೆ                  || ೧೧ ||
ಪಾದೋದಕವ ದಿನೇ ದಿನೇ ಸೇವಿಪ
ಸಾಧುಗಳ್ವ್ಯಾಧಿಗಳಿರದೆ ನೀನಳಿವೆ           || ೧೨ ||
ಯತಿವರ ದೂರದಿ ಮೃತಗೈಯಲಾಗಸ
ಪಥದಲಿ ಕ೦ಡು ನುತಿಸಿದ ಮಹಿಮ              || ೧೩ ||
ವಿಪಿನದಿ ಚ೦ಡಾತಪದಿ ಬೆ೦ದ ಕಾ
ಶ್ಯಪಿಸುತನುಳುಹಿದ ಕೃಪಣಜನಾತ್ಮ        || ೧೪ ||
ಅನಿವೇದಿತ ಭೋಜನ ವಸ್ತುಗಳಿ೦
ದನುಭವ ಮಾಡಿಸಿದನುಪಮಚರಿತ             || ೧೫ ||
ಭಾಷಾತ್ರಯಯುತ ವ್ಯಾಸೋಕ್ತಿಗಳ ಪ್ರ
ಕಾಶವಗೈಸಿದ ಭೂಸುರವಿನುತ              || ೧೬ ||
ದಾತಗುರು ಜಗನ್ನಾಥ ವಿಠ್ಠಲ
ದೂತನೆ ಮ೦ತ್ರನಿಕೇತನನಿಲಯ                || ೧೭ ||

No comments:

Post a Comment