ಪಾರ್ವತಿ ಪಾಲಿಸೆನ್ನ ಮಾನಿನಿ ರನ್ನೆ ।।ಪ॥
ಪಾರ್ವತಿ ಭಕ್ತರ ಸಾರಥಿ ವಂದಿತೆ
ಸುರಪತಿ ಗಜಮುಖ ಮೂರುತಿ ಮಾತೆ ।।೧।।
ಸುರಪತಿ ಗಜಮುಖ ಮೂರುತಿ ಮಾತೆ ।।೧।।
ಮನದಭಿಮಾನಿಯೇ ನೆನೆವೆನು ನಿನ್ನ
ಅನುಸರಿಸೆನ್ನನು ಅಂಬುಜ ಪಾಣಿ ।।೨।।
ಅನುಸರಿಸೆನ್ನನು ಅಂಬುಜ ಪಾಣಿ ।।೨।।
ಮಂಗಳೆ ಮೃಡನ ಅಂತರಂಗಳೇ ಹರಿಪದ
ಭೃಂಗಳೆ ತೊಂಗಳೇ ಪನ್ನಗ ವೇಣಿ ।।೩।।
ಭೃಂಗಳೆ ತೊಂಗಳೇ ಪನ್ನಗ ವೇಣಿ ।।೩।।
ಗುಣ ಪೂರ್ಣ ವೇಣು ಗೋಪಾಲ ವಿಠಲನ್ನ
ಕಾಣಿಸಿ ಕೊಡುವಂತ ಶೂಲಿಯ ರಾಣಿ ।।೪।।
ಕಾಣಿಸಿ ಕೊಡುವಂತ ಶೂಲಿಯ ರಾಣಿ ।।೪।।
No comments:
Post a Comment