Labels

Monday, 7 October 2019

ಪರಮ ಹರುಷವಾಯಿತು Paramaatma sahitya

ಪರಮ ಹರುಷವಾಯಿತು ವಿಜಯರಾಯಗುರುಗಳಂಘ್ರಿಯನೆ ಕಂಡು ||pa||
ಪರಿಪರಿ ಜನುಮದ ಥರಥರದಘಗಳುತಿರುಗಿ ನೋಡದಲೇವೆ ತೆರಳಿ ಪೋದವು ಯಿಂದು ||a.pa||
ಕಾನನದೊಳು ತಿರುಗಿ ತನ್ನ ಮಾತಿ-ಯಾನು ಕಾಣದೆ ಚಿಂತಿಸಿ |
ಧೇನಿಸಿ ಅರಸಲಾಕ್ಷಣದೊಳಗವಳ ವತ್ಸತಾನು ಕೂಗಲು ಕಾಮಧೇನು ಒದಗಿದಂತೆ ||1||
ತರಣಿಯ ಕಿರಣದಿಂದ ತಪಿಸಿನೆರ ಬಾಯ ಬಿಡವುತ ಬಪ್ಪರನ |
ಕರವ ಪಿಡಿದು ಸುರತರುವಿನಡಿಯಲ್ಲಿ ಕು-ಳ್ಳಿರಿಸಿ ಕುಡಿಯೆ ದಿವ್ಯ ಸರಸಿಯನಿತ್ತಂತೆ ||2||
ಧನವ ಪೋಗಾಡಿ ಕೊಂಡು ನರನು ಬಲುಮನ ಕ್ಲೇಶದಿಂದಿರಲು |
ಘನ ಮಹಿಮನೆ ನಮ್ಮ ಮೋಹನ ವಿಠಲ-ವನ ಕೈಯ್ಯೊಳಗ ಚಿಂತಾಮಣಿಯನುಯಿತ್ತಂತೆ ||3||

No comments:

Post a Comment