Labels

Sunday, 6 October 2019

ನಿನ್ನನಾಶ್ರಯಿಸುವೆನೊ ninnashrayavenu

ನಿನ್ನನಾಶ್ರಯಿಸುವೆನೊ ನಿಗಮಗೋಚರ ನಿತ್ಯ
ಬೆನ್ನಬಿಡದೇ ಕಾಯೋ ಮನದೀಷ್ಟವೀಯೋ
ಕುಂದಣದೊಳಾಶ್ರಯವೊ ನವರತ್ನಗಳಿಗೆಲ್ಲಾ
ಚಂದಿರನ ಆಶ್ರಯವೊ ಚಕೋರಗೆ
ಕಂದರ್ಪನಾಶ್ರಯವೊ ವಸಂತಕಾಲಕ್ಕೆ
ಗೋವಿಂದನಾಶ್ರಯವೊ ಮರಣಕಾಲಕ್ಕೆ
ಪತಿವ್ರತಾವನಿತೆರಿಗೆ ಪತಿಯೊಂದೆ ಆಶ್ರಯವೊ
ಯತಿಗಳಿಗೆ ಶೃತಿ ಪ್ರಣವನಾಶ್ರಯವೊ
ಮತಿಯುಕ್ತನಾದವಗೆ ಹರಿ ಸ್ತುತಿಯೆ ಆಶ್ರಯವೊ
ಹಿತವಾದ ಪುರಂದರ ವಿಠಲ ನಿನ್ನಾಶ್ರಯವೊ

No comments:

Post a Comment