ನೀನೆ ಅನಾಥಬಂಧು ಕಾರುಣ್ಯ ಸಿಂಧು
ಮದಗಜವೆಲ್ಲ ಕೂಡಿದರೇನು
ಅದರ ವ್ಯಾಳ್ಯಕೆ ಒದಗಲಿಲ್ಲ
ಅದರ ವ್ಯಾಳ್ಯಕೆ ಒದಗಲಿಲ್ಲ
ಮದನನಯ್ಯ ಮಧುಸೂಧನ ಎನ್ನಲು
ಮುದದಿಂದೊದಗಿದೆಯೊ ಕೃಷ್ಣಾ
ಮುದದಿಂದೊದಗಿದೆಯೊ ಕೃಷ್ಣಾ
ಪತಿಗಳೈವರಿದ್ದರೇನು ಸತಿಯ ಭಂಗ ಬಿಡಿಸಲಿಲ್ಲ
ಗತಿನೀನೇ ಮುಕುಂದಾ ಎನ್ನಲೂ
ಅತಿವೇಗದಿ ಅಕ್ಷಯವನಿತ್ತೆ ಕೃಷ್ಣಾ
ಗತಿನೀನೇ ಮುಕುಂದಾ ಎನ್ನಲೂ
ಅತಿವೇಗದಿ ಅಕ್ಷಯವನಿತ್ತೆ ಕೃಷ್ಣಾ
ಇಳೆಯ ರಕ್ಷಿಸಿ ಕುಲಕೆ ತಂದೆ
ಬಲಿಗೆ ಒಲಿದು ಪದವಿಯನಿತ್ತೆ
ಬಲಿಗೆ ಒಲಿದು ಪದವಿಯನಿತ್ತೆ
ಸುಲಭದಿ ಭಕ್ತರ ಸಲಹುವ
ನಮ್ಮ ಚೆಲುವ ಪುರಂದರ ವಿಠ್ಠಲರಾಯ
ನಮ್ಮ ಚೆಲುವ ಪುರಂದರ ವಿಠ್ಠಲರಾಯ
No comments:
Post a Comment