Labels

Sunday, 6 October 2019

ಏಕೆ ಕಡೆಗಣ್ಣಿಂದ eke kadeganninda

ಏಕೆ ಕಡೆಗಣ್ಣಿಂದ ನೋಡುವೆ
ನೀ ಕರುಣಾಳು ಅಲ್ಲವೇ ಹರಿಯೇ
ಭಕ್ತವತ್ಸಲನಲ್ಲವೇ ಕೃಷ್ಣಾ
ಚಿತ್ಸುಕದಾತ ನೀನಲ್ಲವೇ
ಅತ್ಯಂತ ಅಪರಾಧಿ ನಾನೊದೊಡೇನಯ್ಯಾ ಕೃಷ್ಣಾ…
ಇತ್ತಿತ್ತ ಬಾ ಎನಬಾರದೆ
ದೋಷಿಯು ನಾನಾದೊಡೇನಯ್ಯ
ಸರ್ವ ದೋಷರಹಿತನು ನೀನಲ್ಲವೇ
ಘಾಸಿಯಾತಕೊ ಕೃಷ್ಣಾ ಕೃಷ್ಣಾ ಕೃಷ್ಣಾ ಕೃಷ್ಣಾ ….
ನಂಬಿದೆ ಸಲಹಯ್ಯ
ಶೇಷಶಾಯಿ ಶ್ರೀ ಪುರಂದರ ವಿಠಲ

No comments:

Post a Comment