Labels

Sunday, 6 October 2019

ಕರುಣಿಸೋ ಕೃಷ್ಣಾ karuniso Krishna

ಕರುಣಿಸೋ ಕೃಷ್ಣಾ ಕರುಣಿಸೋ
ಹಗಲು ಇರುಳು ನಿನ್ನ ಸ್ಮರಣೆ ಒದಗುವಂತೆ
ರುಕುಮಾಂಗದನಂತೆ ವ್ರತವನಾನರಿಯೆ
ಶುಕಮುನಿಯಂತೆ ನಿನ್ನ ಸ್ತುತಿಸಲರಿಯೆ
ಬಕವೈರಿಯಂತೆ ಧ್ಯಾನವ ಮಾಡಲರಿಯೆ
ದೇವಕಿಯಂತೆ ನಿನ್ನ ಮುದ್ದಿಸಲರಿಯೆ ಕೃಷ್ಣಾ
ಬಲಿಯಂತೆ ದಾನವ ಕೊಡಲರಿಯೆನೊ
ಭಕ್ತಿ ಛಲವನರಿಯೆ ಪ್ರಹ್ಲಾದನಂತೆ
ಒಲಿಸಲರಿಯೆ ಅರ್ಜುನನಂತೆ ಸಖನಾಗಿ
ಸಲಹಿಕೊಳ್ಳಯ್ಯ ಶ್ರೀ ಪುರಂದರ ವಿಠಲ

No comments:

Post a Comment