Labels

Sunday, 6 October 2019

ಏನು ಮಾಡಿದರೇನು enu maadidareno

ಏನು ಮಾಡಿದರೇನು ಭವ ಹಿಂಗದು
ದಾನವಾಂತಕ ನಿನ್ನ ದಯವಾಗದನಕ
ಅರುಣೋದಯದೊಳೆದ್ದು ಅತಿಸ್ನಾನಗಳ ಮಾಡಿ
ಬೆರಳೆಣಿಸಿದೆ ಅದರ ನಿಜವರಿಯದೆ
ಚರಣ ಸಾಷ್ಟಾಂಗವನು ಮಾಡಿ ನಾ ದಣಿದೆನೊ
ಹರಿ ನಿನ್ನ ಕರುಣ ಕಟಾಕ್ಷವಾಗದನಕ
ಧ್ಯಾನವನು ಮಾಡಿದೆನು ಮೌನವನು ತಾಳಿದೆನು
ನಾನು ಪುರುಷಾರ್ಥಕ್ಕೆ ಮನವನಿಟ್ಟು
ಅನಾಥಬಂಧು ಶ್ರೀ ಪುರಂದರ ವಿಠಲನ್ನ
ಧ್ಯಾನಿಸುವರೊಡಗೂಡಿ ನೆಲೆಗಾಣದನಕ

No comments:

Post a Comment