Labels

Sunday, 6 October 2019

ನಿಂದಕರಿರಬೇಕು nindakarirabeku

ನಿಂದಕರಿರಬೇಕು ಇರಬೇಕು ನಿಂದಕರಿರಬೇಕು
ಹಂದಿ ಇದ್ದರೆ ಕೇರಿ ಹ್ಯಾಂಗೆ ಶುದ್ಧಿಯೊ ಹಾಂಗೆ
ಅಂದಂದು ಮಾಡಿದ ಪಾಪದ ಮಾಮಲ
ತಿಂದು ಹೋಗುವರಯ್ಯ ನಿಂದಕರು
ವಂದಿಸಿ ಸ್ತುತಿಸುವ ಜನರೆಲ್ಲರೂ ನಮ್ಮ
ಹೊಂದಿದ ಪುಣ್ಯವನೊಯ್ಯುವರಯ್ಯಾ
ದುಷ್ಟಜನರು ಈ ಸೃಷ್ಟಿಯೊಳಿದ್ದರೆ
ಶಿಷ್ಟ ಜನರಿಗೆಲ್ಲ ಕೀರ್ತಿಗಳು
ಇಷ್ಟ ಪ್ರದರ್ಶಿ ಕೃಷ್ಣಾ ನಿನ್ನೊಳು
ಇಷ್ಟವರವನೂ ಬೇಡುವೆನಯ್ಯಾ
ದುರುಳ ಜನಂಗಳು ಚಿರಕಾಲ ಇರುವಂತೆ
ಕರವ ಮುಗಿದು ವರ ಬೇಡುವೆನು
ಪರಿಪರಿ ತಮಸಿಗೆ ಗುರಿಯಾದರಲ್ಲದೆ
ಪರಮ ದಯಾನಿಧಿ ಪುರಂದರ ವಿಠಲ

No comments:

Post a Comment