Labels

Friday, 18 October 2019

ನಂದನಂದನ ಪಾಹಿ nandana pahi

ನಂದನಂದನ ಪಾಹಿ ಗುಣವೃಂದ
ಸುಂದರರೂಪ ಗೋವಿಂದ ಮುಕುಂದ ||ಪ||
ದಿನಕರಭವಪಾಲ ಕನಕಾಂಕಿತ ಚೇಲ
ಜನಕಜಾಲೋಲ ಜನಕಾನುಕೂಲ ||೧||
ಪವನಜಪರಿವಾರ ಯವನವಿದಾರ
ನವರತ್ನಹಾರ ನವನೀತಚೋರ ||೨||
ತುಂಗ ವಿಹಂಗತುರಂಗ ದಯಾಪಾಂಗ
ರಂಗವಿಠಲ ಭವಭಂಗ ಶುಭಾಂಗ ||೩||

No comments:

Post a Comment