Labels

Wednesday, 16 October 2019

ಕೊಳಲನೂದುವ kolanuduva

ಕೊಳಲನೂದುವ ಚದುರನ್ಯಾರೆ ಪೇಳಮ್ಮಯ್ಯ
ತಳಿರಂದದಿ ತಾ ಪೊಳೆವ ಕರದಿ ಪಿಡಿದು ||pa||
ನಾದದಿ ತುಂಬಿತು ಗೋವರ್ಧನಗಿರಿಯಾದವಕುಲ ಘನ ಒರೆದಿತು ಖಗಕುಲ
ಸಾಧಿಸಿ ನೋಡಲು ಕೃಷ್ಣನ ಈಗಲೆಸಾಧ್ಯವೆ ನೀ ಬೃಂದಾವನದೊಳು||1||
ಮೇವು ಮರೆತವು ಗೋವುಗಳೆಲ್ಲವುಸಾವಧಾನದಿ ಹರಿದಳು ಯಮುನಾ
ಆವು ಕಾವುತಲಿ ಗೋವಳರೆಲ್ಲರಹಾವ ಭಾವದಲಿ ಬೃಂದಾವನದೊಳು ||2||
ಸುರರು ಸುರಿದರಾಕಾಶದಿ ಸುಮಗಳಸರಿದು ಪೋಗಿ ನೋಡೆ ಬೃಂದಾವನದೊಳು|
ಸಾರಿ ಸಾರಿ ಈ ಕೃಷ್ಣನು ಈಗಲೆತುರಗಳ ಕಾಯ್ವ ಕದಂಬ ವನದೊಳು ||3||

No comments:

Post a Comment