Labels

Sunday, 6 October 2019

ಕೇಶವನೊಲುಮೆಯು keshavanolumeyu

ಕೇಶವನೊಲುಮೆಯು ಆಗುವ ತನಕ
ಹರಿ
 ದಾಸರೊಳಿರುತಿರು ಹೇ ಮನುಜ||ಪ||

ಕ್ಲೇಶಪಾಶಂಗಳ ಹರಿದು ವಿಲಾಸದಿ
ಶ್ರೀಶನ ನುತಿಗಳ ಪೋಗಳುತ ಮನದೊಳು||ಅ.ಪ.||

ಮೋಸದಿ ಜೀವರ ಘಾಸಿ ಮಾಡಿದ ಪಾಪ ಕಾಶಿಗೆಹೋದರೆ ಹೋದೀತೇ
ಶ್ರೀಶನ ಭಕುತರ ದೂಷಿಸಿದ ಫಲ ಕಾಸು ಕೊಟ್ಟರೆಬಿಟ್ಟೀತೆ
ಭಾಷೆಯ ಕೊಟ್ಟು ನಿರಾಶೆಯ ಮಾಡಿದ ಫಲಕ್ಲೇಶವ ಗೊಳಿಸದೆ ಇಟ್ಟೀತೆ
ಭೂಸುರ ಸ್ವವ ಕ್ರಾಸ ಮಾಡಿದ ಫಲ ಏಸೇಸುಜನುಮಕು ಬಿಟ್ಟೀತೆ||1||

ಜೀನನ ವಶದೊಳು ನಾನಾ ದ್ರವ್ಯವಿರೆ ದಾನಧರ್ಮಕೆ ಮನಸಾದೀತೇ
ಹೀನ ಮನುಜನಿಗೆ ಜ್ಞಾನವ ಭೋಧಿಸೆ ಹೀನವಿಷಯವಳಿ ಹೋದೀತೇ
ಮಾನಿನಿ ಮನಸು ನಿಧಾನವಿರದಿರೆ ಮಾನಾಭಿಮಾನಗಳು ಉಳಿದೀತೇ
ಭಾನುಪ್ರಕಾಶನ ಭಜನೆಯ ಮಾಡದ ಹೀನಗೆಮುಕುತಿಯು ದೊರಕೀತೆ||2||

ಕರುಣಾಮ್ರುತದಾಭರಣವ ಧರಿಸಿದ ಪರಮಗೆಸಿರಿಯು ತಪ್ಪೀತೆ
ಕರುಣಾ ಪಾಶದ ಉರವಣೆ ತೊರೆದಾತಗೆ ಶರಣರಕರುಣವು ತಪ್ಪೀತೆ
ಅರಿತು ಶಾಸ್ತ್ರವನು ಆಚರಿಪ ಯೋಗ್ಯಗೆ ಗುರುಉಪದೇಶವು ತಪ್ಪೀತೆ
ವರವೇಲಾಪುರ ದಾದಿಕೇಶವನ ಸ್ಮರಿಸುವವನಿಗೆಮೋಕ್ಷ ತಪ್ಪೀತೆ||3||

No comments:

Post a Comment