ಹರಿ ನಾರಾಯಣ ಹರಿ ನಾರಾಯಣ
ಹರಿ ನಾರಾಯಣ ಎನು ಮನವೆ
ಹರಿ ನಾರಾಯಣ ಎನು ಮನವೆ
ನಾರಾಯಣನೆಂಬ ನಾಮದ ಬೀಜವ
ನಾರದ ಬಿತ್ತಿದ ಧರೆಯೊಳಗೆ
ನಾರದ ಬಿತ್ತಿದ ಧರೆಯೊಳಗೆ
ತರಳ ಧ್ರುವನಿಂದ ಅಂಕುರಿಸಿತು ಅದು
ವರ ಪ್ರಹ್ಲಾದನಿಂದ ಮೊಳಕೆ ಆಯ್ತು
ಧರಣೀಶ ರುಕುಮಾಂಗದನಿಂದ ಚಿಗುರಿತು
ಕುರುಪಿತಾಮಹನಿಂದ ಹೂವಾಯ್ತು
ವರ ಪ್ರಹ್ಲಾದನಿಂದ ಮೊಳಕೆ ಆಯ್ತು
ಧರಣೀಶ ರುಕುಮಾಂಗದನಿಂದ ಚಿಗುರಿತು
ಕುರುಪಿತಾಮಹನಿಂದ ಹೂವಾಯ್ತು
ವಿಜಯನ ಸತಿಯಿಂದ ಕಾಯಾಯ್ತು ಅದು
ಗಜೇಂದ್ರನಿಂದ ದೊರೆಹಣ್ಣಾಯ್ತು
ಶ್ರೀ ಶುಕಮುನಿಯಿಂದ ಪರಿಪಕ್ವವಾಯಿತು
ಅಜಮಿಳ ತಾನುಂಡು ರಸಸವಿದ
ಗಜೇಂದ್ರನಿಂದ ದೊರೆಹಣ್ಣಾಯ್ತು
ಶ್ರೀ ಶುಕಮುನಿಯಿಂದ ಪರಿಪಕ್ವವಾಯಿತು
ಅಜಮಿಳ ತಾನುಂಡು ರಸಸವಿದ
ಕಾಮಿತ ಫಲವೀವ ನಾಮವೊಂದಿರಲಾಗಿ
ಹೋಮ ನೇಮ ಜಪ ತಪವೇಕೆ
ಸ್ವಾಮಿ ಶ್ರೀ ಪುರಂದರ ವಿಠಲನ ನಾಮವ
ನೇಮದಿಂದಲಿ ನೀ ನೆನೆ ಮನವೆ
ಹೋಮ ನೇಮ ಜಪ ತಪವೇಕೆ
ಸ್ವಾಮಿ ಶ್ರೀ ಪುರಂದರ ವಿಠಲನ ನಾಮವ
ನೇಮದಿಂದಲಿ ನೀ ನೆನೆ ಮನವೆ
No comments:
Post a Comment