Labels

Saturday, 12 October 2019

ಹನುಮಂತ ಪಾಹಿ Hanumanta pahi

ಹನುಮಂತ ಪಾಹಿ ಹನುಮಂತ ।
ಮುನಿವ್ಯಾಸ ಕರಕಮಲಾರ್ಚಿತ ಜಯವಂತ ।। pa। ।
ಭೂಲೋಲ ಕೋಲಜಕೂಲ ಸುಮಂದಿರ ।
ಫಾಲಾಕ್ಷ ಪೌಲೋಮಿಪತಿ ವಂದಿತ ।
ಕಾಲಕಾಲದಿ ನಿನ್ನ ಓಲೈಸುವರ ಸಂಗ ।
ಪಾಲಿಸು ಕರುಣದಿ ಕಾಳೀ ಮನೋಹರ ।। 1 ।।
ಬಾಣ ರೂಪನೆ ಪಂಚಬಾಣ ನಿರ್ಜಿತನೆ । ಷ ।
ಟ್ಕೋಣ ಮಧ್ಯದಿ ಬಂದು ನೀ ನೆಲೆಸಿ ।
ಕ್ಷೋಣೀಗೀರ್ವಾಣ ಸುಶ್ರೇಣಿಯಿಂದರ್ಚನೆ ।
ಮಾಣದೆ ಕೈಕೊಂಬ ವಾಣೀಶ ಸ್ಥಾನಾರ್ಹ ।। 2।।
ಸಿಂಧು ಬಂಧನ ಶ್ಯಾಮಸುಂದರವಿಠ್ಠಲನ ।
ದ್ವಂದ್ವ ಪಾದಾರವಿಂದಕೆ ಮಧುಪ ।
ನೆಂದೆನಿಸಿದ ಗುರು ಗಂಧವಾಹನ । ನಿನ ।
ಗೊಂದಿಸುವೆನು ಭಾವಬಂಧ ಬಿಡಿಸಿ ಕಾಯೋ ।। 3 ।।

No comments:

Post a Comment