Labels

Thursday, 17 October 2019

ಹನುಮ ನಮ್ಮ hanuman namma

ಹನುಮ ನಮ್ಮ ಕಾಮಧೇನು ಭೀಮ ನಮ್ಮ ಕಲ್ಪವೃಕ್ಷ
ಆನಂದ ತೀರ್ಥಗುರು ಚಿಂತಾಮಣಿ ||ಪ||
ಸೂತ್ರರಾಮಾಯಣ ಮಹಾವ್ಯಾಕರ್ಣ ಪಂಚ
ರಾತ್ರ ಭಾರತಪುರಾಣ ಶ್ರುತ್ಯರ್ಥ ಸುಧಾರಸವಾ
ವೇತ್ತೃಜನಕಾ ಸಂತತ ಕಿಂಪುರುಷ ವರುಷದಿ ಉಣ
ಲಿತ್ತನಾ ಸುಸ್ವರದಿ ಶ್ರೀರಾಮಪ್ರಿಯನು ||೧||
ರಾಜಸೂಯ ಮೂಲದಿಂದ ಶಾಖೊಪಶಾಖ ಸಧರ್ಮ
ಸೋಜಿಗದ ಕರ್ಮಕುಸುಮ ಬ್ರಹ್ಮತ್ವಛಲದಿ
ರಾಜಿಸುತ್ತ ಸಹಸ್ರಾಕ್ಷ ಸಖಮುಖ್ಯದ್ವಿಜರ್ಗೆ ಸುಖ
ಬೀಜ ನಿಂತು ಹೊರೆದನು ಶ್ರೀಕೃಷ್ಣ ಪ್ರೀಯನು ||೨||
ಹಂತ ಭಾಷ್ಯಧ್ವಾಂತದಿ ವೇದಾಂತವಡೆಗೆ ಪೋಕ ಮಣಿ
ಮಂತನ ಮುರಿದನು ಮೂವತ್ತೆರಡು ಲಕ್ಷಣದಿ
ಕಾಂತಿಯಿಂದ ಪ್ರಸನ್ನವೆಂಕಟ ಕಾಂತನ್ನ ಪ್ರಕಾಶಿಸಿದ
ಚಿಂತಾರ್ಥ ನಮಗೀವ ಶ್ರೀ ವ್ಯಾಸಪ್ರೀಯನು ವೇದವ್ಯಾಸಪ್ರೀಯನು ||೩||

No comments:

Post a Comment