ಹನುಮ ನಮ್ಮ ತಾಯಿ ತಂದೆ
ಭೀಮ ನಮ್ಮ ಬಂಧು ಬಳಗ
ಆನಂದ ತೀರ್ಥರೆ ನಮ್ಮ ಗತಿ ಗೋತ್ರವಯ್ಯ
ಭೀಮ ನಮ್ಮ ಬಂಧು ಬಳಗ
ಆನಂದ ತೀರ್ಥರೆ ನಮ್ಮ ಗತಿ ಗೋತ್ರವಯ್ಯ
ತಾಯಿ ತಂದೆ ಹಸುಳೆಗಾಗಿ ಸಹಾಯ ಮಾಡಿ ಸಾಕುವಂತೆ
ಆಯಾಸವಿಲ್ಲದೆ ಸಂಜೀವನವ ತಂದೆ
ಗಾಯಗೊಂಡ ಕಪಿಗಳನ್ನು ಸಾಯದಂತೆ ಪೊರೆವ
ರಘುರಾಮನಂದ್ರಿಗಳೆ ಸಾಕ್ಷಿ ತ್ರೇತಾಯುಗದಿ
ಆಯಾಸವಿಲ್ಲದೆ ಸಂಜೀವನವ ತಂದೆ
ಗಾಯಗೊಂಡ ಕಪಿಗಳನ್ನು ಸಾಯದಂತೆ ಪೊರೆವ
ರಘುರಾಮನಂದ್ರಿಗಳೆ ಸಾಕ್ಷಿ ತ್ರೇತಾಯುಗದಿ
ಬಂಧುಬಳಗದಂತೆ ಆಪದ್ಭಾಂಧವನಾಗಿ ಪಾರ್ಥನಿಗೆ
ಬಂದ ದುರಿತಗಳ ಪರಿಹರಿಸಿ
ಅಂಧಕಜಾತರ ಕೊಂದು ನಂದಕಂದಗರ್ಪಣೆಯೆಂದ
ಗೋವಿಂದನಂಧ್ರಿಗಳೇ ಸಾಕ್ಷಿ ದ್ವಾಪರಯುಗದಿ
ಬಂದ ದುರಿತಗಳ ಪರಿಹರಿಸಿ
ಅಂಧಕಜಾತರ ಕೊಂದು ನಂದಕಂದಗರ್ಪಣೆಯೆಂದ
ಗೋವಿಂದನಂಧ್ರಿಗಳೇ ಸಾಕ್ಷಿ ದ್ವಾಪರಯುಗದಿ
ಗತಿಗೋತ್ರರಂತೆ ಸಾಧುಪತಿಗಳಿಗೆ ಮತಿಯ ತೋರಿ
ಮತಿಗೆಟ್ಟ ಇಪ್ಪತ್ತೊಂದು ಮತವ ಖಂಡಿಸಿ
ಮತಿವಂತ ಸದ್ವೈಷ್ಣವರಿಗೆ ಸದ್ಗತಿಯ ತೋರಿದ
ಪರಮಾತ್ಮಗತಿ ಪುರಂದರ ವಿಠಲನೆ ಸಾಕ್ಷಿ ಕಲಿಯುಗದಲ್ಲಿ
ಮತಿಗೆಟ್ಟ ಇಪ್ಪತ್ತೊಂದು ಮತವ ಖಂಡಿಸಿ
ಮತಿವಂತ ಸದ್ವೈಷ್ಣವರಿಗೆ ಸದ್ಗತಿಯ ತೋರಿದ
ಪರಮಾತ್ಮಗತಿ ಪುರಂದರ ವಿಠಲನೆ ಸಾಕ್ಷಿ ಕಲಿಯುಗದಲ್ಲಿ
No comments:
Post a Comment