Labels

Monday, 7 October 2019

ಕಂಗಳಿದ್ಯಾತಕೊ kangaludyatako

ಕಂಗಳಿದ್ಯಾತಕೊ ಕಾವೇರಿ ರಂಗನ ನೋಡದ
ಕಸ್ತೂರಿ ರಂಗನ ನೋಡದ ||ಪ||
ಜಗಂಗಳೊಳಗೆ ಮಂಗಳ ಮೂರುತಿ
ರಂಗನ ಶ್ರೀಪಾದಂಗಳ ನೋಡದ || ಅ.ಪ||
ಎಂದಿಗಾದರೊಮ್ಮೆ ಜನರು
ಬಂದು ಭೂಮಿಯಲ್ಲಿ ನಿಂದು
ಚಂದ್ರಪುಷ್ಕರಣಿ ಸ್ನಾನವ ಮಾಡಿ
ಆನಂದದಿಂದ ರಂಗನ ನೋಡದ ||1||
ಹರಿಪಾದೋದಕ ಸಮ ಕಾವೇರಿ
ವಿರಜಾನದಿಯ ಸ್ನಾನವ ಮಾಡಿ
ಪರಮ ವೈಕುಂಠ ರಂಗಮಂದಿರ
ಪರವಾಸುದೇವನ ನೋಡದ ||2||
ಹಾರ ಹೀರ ವೈಜಯಂತಿ
ತೋರ ಮುತ್ತಿನ ಹಾರ ಪದಕ
ತೇರನೇರಿ ಬೀದಿಲಿ ಬರುವ
ಶ್ರೀರಂಗವಿಠಲ ರಾಯನ ನೋಡದ ||3||

No comments:

Post a Comment