Labels

Monday, 7 October 2019

ಅನುಭವದಡಿಗೆಯ ಮಾಡಿ anubhavada adigeya maadi

ಅನುಭವದಡಿಗೆಯ ಮಾಡಿ
ಅದಕನುಭವಿಗಳು ಬಂದು ನೀವೆಲ್ಲ ಕೂಡಿ
ತನುವೆಂಬೊ ಭಾಂಡವ ತೊಳೆದೂ
ಕೆಟ್ಟ ಮನದ ಚಂಚಲವೆಂಬ ಮುಸುರೆಯ ತೊಳೆದೂ
ಘನವಾಗಿ ಮನೆಯನು ಬಳಿದೂ
ಅಲ್ಲಿ ಮಿನುಗುವ ತ್ರಿಗುಣದ ಬಲಿಗುಂಡನೆರೆದು
ವಿರತಿಯೆಂಬ ಮಡಿಯುಟ್ಟು
ಷ್ರೇಷ್ಟ ಹರಿಭಕ್ತಿಯೆಂಬ ನೀರನೆಸರಿಟ್ಟು
ಅರಿವೆಂಬ ಬೆಂಕಿಯ ಕೊಟ್ಟು
ಮಾಯಮದವೆಂಬ ಕಾಷ್ಟವ ಮುದದಿಂದ ಸುಟ್ಟು
ಕರುಣೆಂಬೊ ಸಾಮಗ್ರಿ ಹೂಡಿ
ಮೋಕ್ಷ ಪರಿಕರವಾದಂತ ಪಾಕವ ಮಾಡಿ
ಗುರುಶರಣರು ಸವಿದಾಡಿ
ನಮ್ಮ ಪುರಂದರ ವಿಠಲನ ಬಿಡದೆ ಕೊಂಡಾಡಿ

1 comment:

  1. ಇದು ಸರ್ಪಭೂಷಣ ಶಿವಯೋಗಿಗಳ ಪದ

    ReplyDelete