Labels

Friday, 11 October 2019

ಹನುಮಾನ್ ಕೀ ಜೈ Hanuman ki jai

ಹನುಮಾನ್ ಕೀ ಜೈ ಹನುಮಾನ್ ಕೀ ಜೈ
ಹನುಮಾನ್ ಕೀ ಜೈ ಜೈ ಹನುಮಾನ್ || ಪ ||
ಥೈ ಥೈ ಥೈ ಥೈ ಥೈಥಕ ಥೈಥಕ
ತಕಿಟ ತಕಿಟ ತಕ ಜೈ ಹನುಮಾನ್ || ಅ ಪ ||
ಹರಿ ಸರ್ವೋತ್ತಮನೆಂಬುವ ತತ್ವಕೆ ಜಯ
ಭೇರಿಯ ಹೊಡೆದೆಯೋ ಹನುಮ
ಢಣ ಢಣ ಢಣ ಢಣ ಢಣ ಢಣ
ಢಣ ಜಯಭೇರಿಯ ನಾದವು ಕೇಳುತಿದೆ || ೧ ||
ವೈಷ್ಣವ ತತ್ವಗಳನು ಬೋಧಿಸಿ
ಜಯಭೇರಿಯ ಹೊಡೆದೆಯೋ ಬಲ ಭೀಮ
ಢಣ ಢಣ ಢಣ ಢಣ ಢಣ ಢಣ
ಢಣ ಜಯಭೇರಿಯ ನಾದವು ಕೇಳುತಿದೆ || ೨ ||
ಮೋಕ್ಷಕೆ ಒಳ್ಳೆಯ ಮಾರ್ಗವ ತೋರುವ
ಜಯಭೇರಿಯ ಹೊಡೆದೆಯೋ ಮಧ್ವ
ಢಣ ಢಣ ಢಣ ಢಣ ಢಣ ಢಣ
ಢಣ ಜಯಭೇರಿಯ ನಾದವು ಕೇಳುತಿದೆ || ೩ ||
ಅಂದಿನ ನಾದವು ಇಂದು ನುಡಿಯುತಿರೆ
ಮಂದಿಗಳೆಲ್ಲರು ಕೇಳುವರು
ತಂದೆ ಪ್ರಸನ್ನನ ಮಂದಿರದಲಿ ಇದು
ಎಂದೆಂದಿಗೂ ಶಾಶ್ವತವಿರಲಿ || ೪ ||

2 comments:

  1. ಧನ್ಯವಾದಗಳು. ಇಂತಹ ಉಪಯುಕ್ತ ದಾಸ ಸಾಹಿತ್ಯದ ಮಾಹಿತಿ ನೀಡುವ ಕೆಲಸ ನಿಜವಾದ ಈಶ ಸೇವೆ....

    ReplyDelete