ಹನುಮ ಭೀಮ ಮಧ್ವ ಮುನಿಯ ನೆನೆದು ಬದುಕಿರೋ ||ಪ||
ಅನುಮಾನಂಗಳಿಲ್ಲದಲೆ ಮನೋಭೀಷ್ಟಂಗಳನೀವ ||ಅ.ಪ||
ಅನುಮಾನಂಗಳಿಲ್ಲದಲೆ ಮನೋಭೀಷ್ಟಂಗಳನೀವ ||ಅ.ಪ||
ಪ್ರಾಣಿಗಳ ಪ್ರಾಣೋದ್ಧಾರ ಜೀವರೋತ್ತಮರು ಮತ್ತು
ಪ್ರಾಣಾಪಾನ ವ್ಯಾನೋದಾನ ಸಮಾನರೊಳುತ್ಕೃಷ್ಟ
ಕಾಣಿರೇನೊ ಕಾಯ ಕರ್ಮ ಚಕ್ಷುರಿಂದ್ರಿಯಗಳಿಗೆ
ತ್ರಾಣಗೊಟ್ಟು ಸಲಹುವ ಜಾಣ ಗುರು ಮುಖ್ಯ ಪ್ರಾಣ ||
ಪ್ರಾಣಾಪಾನ ವ್ಯಾನೋದಾನ ಸಮಾನರೊಳುತ್ಕೃಷ್ಟ
ಕಾಣಿರೇನೊ ಕಾಯ ಕರ್ಮ ಚಕ್ಷುರಿಂದ್ರಿಯಗಳಿಗೆ
ತ್ರಾಣಗೊಟ್ಟು ಸಲಹುವ ಜಾಣ ಗುರು ಮುಖ್ಯ ಪ್ರಾಣ ||
ಕಾಮಧೇನು ಚಿಂತಾಮಣಿ ಕಲ್ಪ ವೃಕ್ಷನಾದ ಸ್ವಾಮಿ
ಪ್ರೇಮದಿಂದಲಿ ನೆನೆಯುವವರ ಭಾಗ್ಯಕ್ಕೆಣೆಯುಂಟೆ
ಸಾಮಾನ್ಯವಲ್ಲವೋ ಈತ ಮೋಕ್ಷ ಸಂಪದವಿಗಳ ದಾತ
ಆ ಮಹಾ ಅಪರೋಕ್ಷ ಜ್ಞಾನ ದಾರ್ಢ್ಯ ಭಕ್ತಿ ಕೊಡುವ ||
ಪ್ರೇಮದಿಂದಲಿ ನೆನೆಯುವವರ ಭಾಗ್ಯಕ್ಕೆಣೆಯುಂಟೆ
ಸಾಮಾನ್ಯವಲ್ಲವೋ ಈತ ಮೋಕ್ಷ ಸಂಪದವಿಗಳ ದಾತ
ಆ ಮಹಾ ಅಪರೋಕ್ಷ ಜ್ಞಾನ ದಾರ್ಢ್ಯ ಭಕ್ತಿ ಕೊಡುವ ||
ಅವತಾರ ತ್ರಯಂಗಳಲ್ಲಿ ಹರಿಯ ಸೇವಿಸುತ ಮತ್ತು
ತವಕದಿಂದ ಪೂಜಿಪ ಮಹಾ ಮಹಿಮೆಯುಳ್ಳವರೊ
ಕವಿತ ವಾಕ್ಯವಲ್ಲವಿದು ಅವಿವೇಕವೆಂದೆಣಿಸಬೇಡಿ
ಭವಬಂಧನ ಕಳೆವ ಕಾವ ಪುರಂದರ ವಿಠಲನ ದಾಸ ||
ತವಕದಿಂದ ಪೂಜಿಪ ಮಹಾ ಮಹಿಮೆಯುಳ್ಳವರೊ
ಕವಿತ ವಾಕ್ಯವಲ್ಲವಿದು ಅವಿವೇಕವೆಂದೆಣಿಸಬೇಡಿ
ಭವಬಂಧನ ಕಳೆವ ಕಾವ ಪುರಂದರ ವಿಠಲನ ದಾಸ ||
No comments:
Post a Comment