Labels

Monday, 14 October 2019

ಗಜವದನ ಬೇಡುವೆ Gajavadana Beduve

ಗಜವದನ ಬೇಡುವೆ ಗೌರೀತನಯ           ।।ಪ॥
ತ್ರಿಜಗವಂದಿತನೆ ಸುಜನರ ಪೊರೆವನೆ       ।।ಅ.ಪ॥
ಪಾಶಾಂಕುರ ಪರಮಪವಿತ್ರ
ಮೂಷಕವಾಹನ ಮುನಿಜನ ಪ್ರೇಮ          ।।೧।।
ಮೋದದಿ ನಿನ್ನಯ ಪಾದವ ತೋರೋ
ಸಾಧುವಂದಿತನೆ ಆದರದಿಂದಲಿ               ।।೨।।
ಸರಸಿಜನಾಭ ಶ್ರೀ ಪುರಂದರವಿಠಲನ
ನಿರುತ ನೆನೆಯುವಂತೆ ಮಾಡೋ             ।।೩।।

No comments:

Post a Comment