ಎಂಥಾ ಬಲವಂತನೊ ಕುಂತಿಯ ಸುಜಾತನೊ || ಪ ||
ಭಾರತಿಗೆ ಕಾಂತನೊ ನಿತ್ಯ ಶ್ರೀಮಂತನೊ || ಅ.ಪ ||
ಭಾರತಿಗೆ ಕಾಂತನೊ ನಿತ್ಯ ಶ್ರೀಮಂತನೊ || ಅ.ಪ ||
ರಾಮಚಂದ್ರನ ಪ್ರಾಣನೊ ಅಸುರಹೃದಯಬಾಣನೊ
ಖಳರ ಗಂಟಲಗಾಣನೊ ಜಗದೊಳಗೆ ಪ್ರವೀಣನೊ || ೧ ||
ಖಳರ ಗಂಟಲಗಾಣನೊ ಜಗದೊಳಗೆ ಪ್ರವೀಣನೊ || ೧ ||
ಕುಂತಿಯ ಕಂದನೊ ಸೌಗಂಧಿಕವ ತಂದನೊ
ಕುರುಕ್ಷೇತ್ರಕೆ ಬಂದನೊ ಕೌರವರ ಕೊಂದನೊ || ೨ ||
ಕುರುಕ್ಷೇತ್ರಕೆ ಬಂದನೊ ಕೌರವರ ಕೊಂದನೊ || ೨ ||
ಭಂಡಿ ಅನ್ನವನುಂಡನೊ ಬಕನ ಪ್ರಾಣವ ಕೊಂಡನೊ
ಭೀಮ ಪ್ರಚಂಡನೊ ದ್ರೌಪದಿಗೆ ಗಂಡನೊ || ೩ ||
ಭೀಮ ಪ್ರಚಂಡನೊ ದ್ರೌಪದಿಗೆ ಗಂಡನೊ || ೩ ||
ವೈಷ್ಣವಾಗ್ರಗಣ್ಯನೊ ಸಂಚಿತಾಗ್ರಪುಣ್ಯನೊ
ದೇವವರೇಣ್ಯನೊ ದೇವಶರಣ್ಯನೊ || ೪ ||
ದೇವವರೇಣ್ಯನೊ ದೇವಶರಣ್ಯನೊ || ೪ ||
ಮಧ್ವಶಾಸ್ತ್ರವ ರಚಿಸಿದನೊ ಸದ್ವೈಷ್ಣವರ ಸಲಹಿದನೊ
ಉಡುಪಿಲಿ ಕೃಷ್ಣನ ನಿಲಿಸಿದನೊ ಪುರಂದರವಿಠಲಗೆ ದಾಸನೊ || ೫ ||
ಉಡುಪಿಲಿ ಕೃಷ್ಣನ ನಿಲಿಸಿದನೊ ಪುರಂದರವಿಠಲಗೆ ದಾಸನೊ || ೫ ||
No comments:
Post a Comment