ವಾದಿಂದ್ರ ತೀರ್ಥರು
ಎಣೆಯಾರೊ ನಿಮಗೆ ಕುಂಭಿಣಿಯ ಮಧ್ಯದ
ಲಿನ್ನು ಮನಸಿಜ ಆರಂಭಿಸಿ ಮನು
ಮುನಿಕುಲ ಚಿಂತಾಮಣಿಯೆ ವಾದೇಂದ್ರ ಮರುತಮತ
ವನಧಿಚಂದ್ರ ಕುಮತಗಜಗಣಕೆ ಮೃಗೇಂದ್ರ ।।ಪ॥
ಎಣೆಯಾರೊ ನಿಮಗೆ ಕುಂಭಿಣಿಯ ಮಧ್ಯದ
ಲಿನ್ನು ಮನಸಿಜ ಆರಂಭಿಸಿ ಮನು
ಮುನಿಕುಲ ಚಿಂತಾಮಣಿಯೆ ವಾದೇಂದ್ರ ಮರುತಮತ
ವನಧಿಚಂದ್ರ ಕುಮತಗಜಗಣಕೆ ಮೃಗೇಂದ್ರ ।।ಪ॥
ಸ್ನಾನುನುಷ್ಠಾನ ಕಾಲದಲ್ಲಿ ಶ್ರೀಶರಂಗ
ಪಾಣಿಯ ನ್ಯಾಸ ಧ್ಯಾನ ಮಾಡುವ ಧೀರ
ದಾನಾದಿ ಕರ್ಮ ಶಮೆ ದಮೆ ನಾನಾ
ಗುಣಾರ್ಣ ಭಜಿಸುವಂಥ ಧೀರ ಪ್ರಸನ್ನ ।।೧।।
ಪಾಣಿಯ ನ್ಯಾಸ ಧ್ಯಾನ ಮಾಡುವ ಧೀರ
ದಾನಾದಿ ಕರ್ಮ ಶಮೆ ದಮೆ ನಾನಾ
ಗುಣಾರ್ಣ ಭಜಿಸುವಂಥ ಧೀರ ಪ್ರಸನ್ನ ।।೧।।
ಹರಿಯೇ ಸರ್ವೋತ್ತಮ ಮೃತ ದೇವನೆ
ಗುರು ಎರಡುಮೂರು ಭೇದ ಸ್ಥಿರವೆಂದು ಸ್ಥಾಪಿಸಿ
ಧರೆಯೊಳು ಮೆರೆದೆ ವಾದೆಗಳುಕ್ತಿಧುರದಿಂದ
ತರಿದೆ ನಂಬಿದವರ ಕರುಣದಿ ಪೊರೆದೆ ।।೨।।
ಗುರು ಎರಡುಮೂರು ಭೇದ ಸ್ಥಿರವೆಂದು ಸ್ಥಾಪಿಸಿ
ಧರೆಯೊಳು ಮೆರೆದೆ ವಾದೆಗಳುಕ್ತಿಧುರದಿಂದ
ತರಿದೆ ನಂಬಿದವರ ಕರುಣದಿ ಪೊರೆದೆ ।।೨।।
ವೇದಾರ್ಥಗಳನೆಲ್ಲ ವ್ಯಾಖ್ಯಾನ ಮುಖದಿಂದ
ಸಾಧಿಸಿ ಧರೆಗೆಲ್ಲ ಬೋಧಿಸಿ ಅವರಘ
ಭೇದವ ತರಿದೆ ಮನೋಭೀಷ್ಟ ಮೋ
ದದಿಗರೆದೆ ರಾಮನಾಮ ಸ್ವಾದ ಸವಿದೆ ।।೩।।
ಸಾಧಿಸಿ ಧರೆಗೆಲ್ಲ ಬೋಧಿಸಿ ಅವರಘ
ಭೇದವ ತರಿದೆ ಮನೋಭೀಷ್ಟ ಮೋ
ದದಿಗರೆದೆ ರಾಮನಾಮ ಸ್ವಾದ ಸವಿದೆ ।।೩।।
ದರಹಾಸಸರಿತೆತೀರ ಮಂತ್ರಾಲಯದಲ್ಲಿ
ಗುರುರಾಯ ಆಜ್ಞೆಯಿಂದವರ ಸನ್ನಿಧಿಯಲ್ಲಿ
ಸ್ಥಿರವಾಗಿ ನಿಂದೆ ಸುಮಹಿಮೆಯಲಿ
ಮೆರೆವೆ ನೀ ಮುಂದೆ ದಯದಲೆನ್ನ ಪೊರೆಯಯ್ಯ ತಂದೆ ।।೪।।
ಗುರುರಾಯ ಆಜ್ಞೆಯಿಂದವರ ಸನ್ನಿಧಿಯಲ್ಲಿ
ಸ್ಥಿರವಾಗಿ ನಿಂದೆ ಸುಮಹಿಮೆಯಲಿ
ಮೆರೆವೆ ನೀ ಮುಂದೆ ದಯದಲೆನ್ನ ಪೊರೆಯಯ್ಯ ತಂದೆ ।।೪।।
ಮರುತಾಂತರ್ಗತ ಗೋಪಾಲವಿಠಲನ್ನ
ಹರುಷದಿ ಪೂಜಿಪ ಗುರು ಉಪೇಂದ್ರ
ತೀರ್ಥರ ಕರಕಂಜಜಾತ ಭಕ್ತರಕಾಮ ವರ
ಪಾರಿಜಾತ ಕಾಮಧೇನು ಕರುಣಿಸೊ ದಾತ ।।೫।।
ಹರುಷದಿ ಪೂಜಿಪ ಗುರು ಉಪೇಂದ್ರ
ತೀರ್ಥರ ಕರಕಂಜಜಾತ ಭಕ್ತರಕಾಮ ವರ
ಪಾರಿಜಾತ ಕಾಮಧೇನು ಕರುಣಿಸೊ ದಾತ ।।೫।।
No comments:
Post a Comment