Labels

Friday, 18 October 2019

ಚಂದ್ರಿಕಾಚಾರ್ಯರ chandrikacharyars

ಚಂದ್ರಿಕಾಚಾರ್ಯರ ಪಾದ ದ್ವಯಕೆ
ಎರುಗುವೆ ಪ್ರತಿವಾಸರಕೆ ||pa||
ನವ ವೃಂದಾವನ ಮ‌ಧ್ಯದಿ ಶೋಭಿಪ
ನವವಿಧ ವರಗಳ ನೀಡುತ ಸತತ
ನವ ಮಣಿ ಮುಕುಟ ಮಸ್ತಕದಿ ಶೋಭಿಪ
ನವ್ಯ ಜೀವನ ಶುಭಫಲ ಕೋರುತ
ನಂಬಿದ ಭಕ್ತರ ದೋ‌‌ಷಗಳೆಣಿಸದೆ
ಸುಂದರ ರಘುಪತಿ ರಾಮನ ತೋರಿದ ||1||
ವಿಜಯ ಮೂರುತಿ ರಾಮನ ಧ್ಯಾನಿಸಿ
ವಿಜಯ ನಗರ ಸಾಮ್ರಾಜ್ಯ ವಿಸ್ತರಿಸಿ
ವಿಜಿಯಿಸಿ ಸ್ಥಾಪಿಸಿ ಮಧ್ವಮತದ
ದ್ವಿಗವಿಜಯ ತತ್ವ ತಿರುಳನು ಸಾರಿ
ಅಕಳಂಕ ಚರಿತ ಶ್ರೀರಾಮ ಚಂದಿರನ
ಮಹಿಮೆಯ ಇಳೆಯೊಳು ಸಾಧಿಸಿ ತೋರಿದ ||2||
ಯಾಂತ್ರಿಕ ತನದಿ ತಾಪವೆನಿಸುವ
ಯಂತ್ರೋಧಾರಕ ಮೂರ್ತಿಯ ನಿಲ್ಲಿಸಿ
ಮಂತ್ರಾಕ್ಷತೆಯ ಮಹಿಮೆಯ ತೋರಿದ
ಚಿತ್ತದಲಿಟ್ಟು ಚಂದ್ರಿಕಾ ರಚಿಸಿ
ಪಂಚಮುಖದ ಪ್ರಾಣೇಶ ವಿಠ್ಠಲ
ಪಂಚಮಂತ್ರದಿಂದ ಪೂಜಿಸಿ ಯತಿಸಿದ ||3|

No comments:

Post a Comment