ಬರುವುದೆಲ್ಲ ಬರಲಿ ಸಿರಿಹರಿಯ ಕರುಣವಿರಲಿ ||ಪ||
ಗುರುಗಳ ಚರಣಸರೋರುಹ ಮಧುರಸ ತರತರ ತಪದಿ ಮೈಮರೆತಿರಲಿ ||ಅ.ಪ||
ಸತಿಯ ಮತಿಯು ಕೆಡಲಿ ಸುತರತಿಪತಿತರಾಗಿ ಬರಲಿ
ಜೊತೆಯೊಳಿದ್ದ ಹಿತ ಪ್ರತಿಕೂಲನಾಗಲಿ
ವತನ ಕೆಡುವ ಪ್ರಯತ್ನವು ಬರಲಿ ||
ಜೊತೆಯೊಳಿದ್ದ ಹಿತ ಪ್ರತಿಕೂಲನಾಗಲಿ
ವತನ ಕೆಡುವ ಪ್ರಯತ್ನವು ಬರಲಿ ||
ಅರಸು ಕರೆಸದಿರಲಿ ಸತಿ ಸರಸಸುರಿಸದಿರಲಿ
ನರಸಖನಿಗೆ ಭಾರ ಸಮರ್ಪಿಸಲಿ
ವಿರಸಮಾಡಿ ಮನೆ ಮುರಿಸುತ ಬರಲಿ ||
ನರಸಖನಿಗೆ ಭಾರ ಸಮರ್ಪಿಸಲಿ
ವಿರಸಮಾಡಿ ಮನೆ ಮುರಿಸುತ ಬರಲಿ ||
ಮಾನಮಾಡದಿರಲಿ ಜನರಪಮಾನ ಮಾಡಿ ನಗಲಿ
ಜಾನಹೀನ ನೆಂದೆನುತ ನಿಂದಿಸಲಿ
ಶ್ರೀನಿಧಿ ಗೋಪಾಲವಿಠಲ ಬೆರಿಲಿ ||
ಜಾನಹೀನ ನೆಂದೆನುತ ನಿಂದಿಸಲಿ
ಶ್ರೀನಿಧಿ ಗೋಪಾಲವಿಠಲ ಬೆರಿಲಿ ||
No comments:
Post a Comment