Labels

Thursday 17 October 2019

ಬರುವುದೆಲ್ಲ ಬರಲಿ Baruvadella barali

ಬರುವುದೆಲ್ಲ ಬರಲಿ ಸಿರಿಹರಿಯ ಕರುಣವಿರಲಿ ||ಪ||
ಗುರುಗಳ ಚರಣಸರೋರುಹ ಮಧುರಸ ತರತರ ತಪದಿ ಮೈಮರೆತಿರಲಿ ||ಅ.ಪ||
ಸತಿಯ ಮತಿಯು ಕೆಡಲಿ ಸುತರತಿಪತಿತರಾಗಿ ಬರಲಿ
ಜೊತೆಯೊಳಿದ್ದ ಹಿತ ಪ್ರತಿಕೂಲನಾಗಲಿ
ವತನ ಕೆಡುವ ಪ್ರಯತ್ನವು ಬರಲಿ ||
ಅರಸು ಕರೆಸದಿರಲಿ ಸತಿ ಸರಸಸುರಿಸದಿರಲಿ
ನರಸಖನಿಗೆ ಭಾರ ಸಮರ್ಪಿಸಲಿ
ವಿರಸಮಾಡಿ ಮನೆ ಮುರಿಸುತ ಬರಲಿ ||
ಮಾನಮಾಡದಿರಲಿ ಜನರಪಮಾನ ಮಾಡಿ ನಗಲಿ
ಜಾನಹೀನ ನೆಂದೆನುತ  ನಿಂದಿಸಲಿ
ಶ್ರೀನಿಧಿ ಗೋಪಾಲವಿಠಲ ಬೆರಿಲಿ ||

No comments:

Post a Comment