Labels

Thursday, 17 October 2019

ಆವಳಂಜಿಸಿದಳವಳು Avalanjisidalu

ಆವಳಂಜಿಸಿದಳವಳು ಪೇಳು ರಂಗಮ್ಮಾ ನಾ
ನವಳ ಗಾರುಮಾಡುವೆ ನಡೆ ಕೃಷ್ಣಮ್ಮಾ ||ಪ||
ದೂರುವಿರ‍್ಯಾದರೆ ಮಗನ ಹಾದಿಗೆ ಹೋಗದಿರಿ ಎಂದು
ಸಾರಿಕೈಯ ಕಡ್ಡಿಕೊಟ್ಟೆ ಜಾರೆಯರಿಗೆ
ಸಾರಿಸಾರಿಗೆನ್ನ ಮನ ರಟ್ಟು ಮಾಡುವ ಮಾತೇನು
ಆರಿಗೆ ಮಕ್ಕಳಿಲ್ಲೆ ನಾನೇ ಹಡದವಳೇನೋ ||೧||
ಇದ್ದರಿರಲೀ ಕೂಸಿನ ಆಡುವಾಟಕೊಪ್ಪಿದರೆ
ಎದ್ದು ಹೋಗೆಮ್ದರೆ ಹೋಗಲಿಲ್ಲ ಪಳ್ಳಿಂದಾ
ಕದ್ದು ತಿಂದನೆಂಬ ಸುಳ್ಳು ಸುದ್ದಿಗೆ ಕಾರಣವೇನೋ
ಮುದ್ದೆಬೆಣ್ಣೆ ಕೈಯಲಿತ್ತಾರೊಲ್ಲದೆ ಚಲ್ಲುವ ಕಂದಗ ||೨||
ಏನು ಪುಣ್ಯರಾಶಿ ಕೂಡಿತೆಂದು ನಿನ್ನಾಟವ ನೋಡಿ
ಬೀಸಿ ಬಿಗಿದಪ್ಪುವಂಥ ಭಾಗ್ಯವನುಂಡೆ
ಕೂಸೆ ನಿನ್ನ ಕಂಡಸೂಯಾ ಬಡುವಾರ ಅಳಿಯಲಮ್ಮಾ
ದಾಸರಿಂಗೆ ಲೇಸಾಗಲಿ ಪ್ರಸನ್ನವೆಂಕಟ ಕೃಷ್ಣಾ ||೩||

No comments:

Post a Comment