Labels

Monday, 7 October 2019

ಅಂಗಳದೊಳು ರಾಮನಾಡಿದ Angaladolu

ಅಂಗಳದೊಳು ರಾಮನಾಡಿದ ಚಂದ್ರ
ಬೇಕೆಂದು ತಾ ಹಠ ಮಾಡಿದ ॥ಪ॥
ತಾಯಿಯ ಕರೆದು ಕೈ ಮಾಡಿ ತೋರಿದ
ಮುಗಿಲ ಕಡೆಗೊಮ್ಮೆ ದಿಟ್ಟಿಸಿ ನೋಡಿದ
ಚಿನ್ನಿಕೊಳು ಚಂಡು ಬುಗುರಿ ಎಲ್ಲವ
ಬೇಡ ಬೇಡ ಎಂದು ತಾ ಬಿಸಾಡಿದ ॥೨॥
ಕಂದ ಬಾ ಎಂದು ತಾಯಿ ಕರೆದಳು ಮಮ್ಮು
ಉಣ್ಣೆಂದು ಬಣ್ಣಿಸುತ್ತಿದ್ದಳು
ತಾಯಿ ಕೌಸಲ್ಯ ಕಳವಳ ಗೊಂಡಳು ಕಂದ
ಅಂಜಿದನು ಎನ್ನುತಿದ್ದಳು ॥೩॥
ಅಳುವ ಧ್ವನಿ ಕೇಳಿ ರಾಜನು ಮಂತ್ರಿ
ಸಹಿತಾಗಿ ಧಾವಿಸಿ ಬಂದನು
ನಿಲುವ ಕನ್ನಡಿ ತಂದಿರಿಸಿದ
ಶ್ರೀ ರಾಮನ ಎತ್ತಿ ಮುದ್ದಾಡಿದ ॥೪॥
ಕನ್ನಡಿಯೊಳು ಬಿಂಬ ನೋಡಿದ ಚಂದ್ರ
ಸಿಕ್ಕಿದನೆಂದು ಕುಣಿದಾಡಿದ
ಈ ಸಂಭ್ರಮ ನೋಡಿ ಆದಿ ಕೇಶವ
ರಘು ವಂಶವನ್ನೇ ಕೊಂಡಾಡಿದ ॥೫॥

No comments:

Post a Comment