Labels

Monday, 7 October 2019

ಆವ ರೀತಿಯಿಂದ aava reetiyinda

ಆವ ರೀತಿಯಿಂದ ನೀಯೆನ್ನ ಪಾಲಿಸೊ
ಶ್ರೀವಿಭು ಹಯವದನ                    ||ಪ||

ಈ ವಿಧ ಭವದೊಳು ಇಷ್ಟು ಬವಣೆಪಟ್ಟೆ
ತಾವರೆದಳನಯನ ಹಯವದನ       ||ಅ.ಪ||

ಕಾಮನ ಬಾಧೆಯ ತಡೆಯಲಾರದೆ ಕಂಡ
ಕಾಮಿನಿಯರನೆ ಕೂಡಿ
ನೇಮನಿಷ್ಠೆಯಿಂದ ನಿನ್ನನು ಭಜಿಸದೆ
ಪಾಮರನಾದೆನೊ ಹಯವದನ  ||೧||

ಅಂಗನೆಯರಲ್ಲಿ ಅಧಿಕ ಮೋಹದಿಂದ
ಶೃಂಗಾರಗಳನೆ ಮಾಡಿ
ಮಂಗಳಾಂಗನೆ ನಿನ್ನ ಮಹಿಮೆಯ ಪೊಗಳದೆ
ಭಂಗಕ್ಕೆ ಒಳಗಾದೆನೊ ಹಯವದನ ||೨||

ಹೀನಸಂಗವನೆಲ್ಲ ಹಯಮುಖದೇ-
ವನೆ ವರ್ಜಿಸುವಂತೆ ಮಾಡೊ
ಜ್ಞಾನಿಗಳರಸನೆ ದಯವಿಟ್ಟು ನಿನ್ನನು
ಧ್ಯಾನಿಸುವಂತೆ ಮಾಡೊ ಹಯವದನ ||೩

No comments:

Post a Comment