Labels

Monday, 7 October 2019

ರಾಗಿ ತಂದೀರ ಭಿಕ್ಷಕೆ raagi tandira bhikshake

ರಾಗಿ ತಂದೀರ ಭಿಕ್ಷಕೆ ರಾಗಿ ತಂದೀರ
ಯೋಗ್ಯರಾಗಿ ಭೋಗ್ಯರಾಗಿ
ಭಾಗ್ಯವಂತರಾಗಿ ನೀವು
ಅನ್ನದಾನವ ಮಾಡುವರಾಗಿ
ಅನ್ನಛಥ್ರವ ಇಟ್ಟವರಾಗಿ
ಅನ್ಯವಾರ್ತೆಯ ಬಿಟ್ಟವರಾಗಿ
ಅನುದಿನ ಭಜನೆಯ ಮಾಡುವರಾಗಿ
ಸಿರಿರಮಣನ ಸದಾ ಸ್ಮರಿಸುವರಾಗಿ
ಗುರುವಿಗೆ ಬಾಗುವಂತವರಾಗಿ
ಕಿರಿಕಿರಿ ಸಂಸಾರವ ನೀಗುವರಾಗಿ
ಪುರಂದರ ವಿಠಲನ ಸೇವಿಪರಾಗಿ

No comments:

Post a Comment