Labels

Monday, 7 October 2019

ಮಾನವ ಜನ್ಮ manaav janma

ಮಾನವ ಜನ್ಮ ದೊಡ್ಡದು
ಇದ ಹಾನಿ ಮಾಡಲಿಬೇಡಿ ಹುಚ್ಚಪ್ಪಗಳಿರ
ಕಣ್ಣು ಕೈಕಾಲ್ ಕಿವಿ ನಾಲಿಗೆ ಇರಲಿಕ್ಕೆ
ಮಣ್ಣು ಮುಕ್ಕಿ ಮರುಳಾಗುವರೆ
ಹೆಣ್ಣು ಮಣ್ಣಿಗಾಗಿ ಹರಿಯ ನಾಮಾಮೃತ
ಉಣ್ಣದೆ ಉಪವಾಸ ಮಾಡುವರೆ
ಕಾಲನ ಧೂತರು ಕಾಲ್ಪಿಡಿದೆಳೆವಾಗ
ತಾಳು ತಾಳೆಂದರೆ ತಾಳುವರೆ
ಧಾಳಿ ಬಾರದ ಮುನ್ನ ಧರ್ಮವ ಕೈಕೊಳ್ಳಿ
ಸುಳ್ಳಿನ ಸಂಸಾರ ಸುಳಿಗೆ ಸಿಲುಕುವರೆ
ಏನು ಕಾರಣ ನೀವು ಯದುಪತಿಯ ಮರೆತಿರಿ
ಧನಧಾನ್ಯ ಸತಿಸುತರದು ನಿತ್ಯವೆ
ಇನ್ನಾದರೂ ನೀವು ಏಕಭಾವದಿಂದ
ಚನ್ನ ಶ್ರೀ ಪುರಂದರ ವಿಠಲರಾಯನ ಭಜಿಸಿ

No comments:

Post a Comment