Labels

Thursday, 19 March 2020

ಏಳೇಳು ಶರಧಿಯು ಏಕವಾಗಿದೆ elelu sharadhiyu ekavagide

ಏಳೇಳು ಶರಧಿಯು ಏಕವಾಗಿದೆ ಕಣ್ಡ್ಯ ಹೇಗೆ ಬಂದೆ ಹೇಳೋ ಕೋತಿ
ಏಳು ಶರಧಿಯು ಎನಗೆ ಏಳು ಕಾಲುವೆಯು ತುಳಿ ಲಂಘಿ ಸಿ ಬಂದೆ ಭೂತ
ಏಳು ಸಮುದ್ರದೊಳಿರುವ ಮಕಾರಿ ಮತ್ಸ್ಯವು ಹೇಗೆ ಬಿಟ್ಟರು ಹೇಳೋ ಕೋತಿ
ಏಳು ಸಮುದ್ರದ ಮಕಾರಿ ಮತ್ಸ್ಯದ ಕೂಡೆ ಮಾತಾಡಿ ಬಂದೆನೋ ಭೂತ\\೧\\

ಲಂಕಾ  ದ್ವಾರದೊಳೊಬ್ಬ ಲಂಕಿಣಿ ಇರುವಳು ಹೇಗೆ ಬಿಟ್ಟಳು ಹೇಳೋ ಕೋತಿ
ಲಂಕಿಣಿಯನು  ಕೊಂದು  ಶಂಕೆಯಿಲ್ಲದೆ ನಾನು ಬಿಂಕದಿಂದಲಿ ಬಂದೆ ಭೂತ\\೨\\

ಕೊಂಬೆ ಕೊಂಬೆಗೆ ಕೋಟಿ ಮಂದಿ ರಕ್ಶಸರಿರೆ ಹೇಗೆ ಬಿಟ್ಟರು ಪೇಳು ಹೇಳೋ ಕೋತಿ
ಕೊಂಬೆ ಕ್ಕೊಂಬೆಗೆ ಕೋಟಿ ಮಂದಿ ರಾಕ್ಷಷರನ್ನೂ  ಕೊಂದ  ಬಂದೆನೋ ಭೂತ\\೩\\

ಯಾವೂರೋ ಎಲೋ ನೀನು ಯಾವ ಭೂಮಿಯೋ ನಿಂದು ಯಾಕೆ ಬಂದೆ ಹೇಳೋ ಕೋತಿ
ಯಾವ ವನದೊಳಗೆ ಜಾನಕಿ ದೇವಿ ಇದ್ದಾಳೆ ಅವಳೇ ನೋಡ ಬಂದ ಭೂತ\\೪\\

ದಕ್ಶಿಣಪುರಿ  ಇಕ್ನ್ನಾವರಿಗಲ್ಲದೆ  ದ್ರಾಕ್ಶಾದ್ಯರಿಗಳವಲ್ಲ ಕೋತಿ
ಪಕ್ಶಿ ಧ್ವಜ ರಾಮನ ಅಪ್ಪಣೆಯೆನಗಿಲ್ಲ ಈ ಕ್ಶಣ ತಪ್ಪಿಸಿ ಕೊಂಡೆ  ಭೂತ \\೫\\

ದೂತನಗಿಹೆ ಎನ್ನ ಕೈಯೊಳು ಸಿಕ್ಕಿಹೆ ಕೋಪವಿನೇತಕ್ಕೊ ಕೋತಿ
ನಾ ತಾಳಿ ಕೊಂಡಿಹನು  ಈ ಕ್ಷಣದಿ  ಲಂಕೆ ನಿರ್ಧೂಮವನು ಮಲ್ಪೆ ಭೂತ\\೫\\

ನಿಮ್ಮಂದ ದಾಸರು ನಿಮ್ಮರಸನ ಬಳಿ ಎಶ್ಟು ಮನ್ದಿದ್ದಾರೋ ಕೋತಿ
ನನ್ನಂಥ ದಾಸರು ನಿನ್ನಂಥ ಹೇಡಿಗಳು ಕೋಟ್ಯಾನು ಕೋಟಿಯೊ ಭೂತ\\೬\\


ಎಲ್ಲಿಂದ ನೀ ಬಂದೆ ಏತಕ್ಕೆಲ್ಳರ ಕೊಂದೆ ಯವರಸಿನ ಬಂಟ  ಕೋತಿ
ಎಲ್ವಯೋ-ಧ್ಯಾಪುರದರಾಸು ಜಾನಕೀಪತಿ ರಾಮಚಂದ್ರನ ಬಂಟ  ಭೂತ\\೭\\

ಸಿರಿ ರಾಮಚಂದ್ರನು  ನಿನ್ನರಸನಾದರೆ ಆತ ಮುನ್ನಾರು  ಹೇಳೋ ಕೋತಿ
ಹಿರಣ್ಯಕನನು ಸಿರಿ  ಪ್ರಹ್ಲಾದ ಗೋಲಿದ ಶ್ರೀ ಪುರಂದರ ವಿಠ್ಠಲನು  ಭೂತ\\೮\\

1 comment: